ಹುಲಿಕಲ್ ಘಾಟಿ ಮತ್ತು ರೈಲ್ವೆ ಸಂಚಾರದ ಬಗ್ಗೆ ಸಂಸದರ ಮಹತ್ವದ ಅಪ್ಡೇಟ್- Important update from MP on Hulikal Ghati and Railway traffic

 SUDDILIVE || SHIVAMOGGA

ಹುಲಿಕಲ್ ಘಾಟಿ ಮತ್ತು ರೈಲ್ವೆ ಸಂಚಾರದ ಬಗ್ಗೆ ಸಂಸದರ ಮಹತ್ವದ ಅಪ್ಡೇಟ್- Important update from MP on Hulikal Ghati and Railway 

   

Mp, hulikal

ಮಲೆನಾಡು ಹಾಗೂ ಕರಾವಳಿ ಭಾಗದ ಜನತೆಗೆ ಒಂದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಸುದ್ದಿಯನ್ನ ಸಂಸದ ರಾಘವೇಂದ್ರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 

ಶಿವಮೊಗ್ಗ ಕ್ಷೇತ್ರದ ದಶಕಗಳ ಕನಸಾಗಿದ್ದ 'ಶಿವಮೊಗ್ಗ - ಶೃಂಗೇರಿ - ಮಂಗಳೂರು' ನೂತನ ರೈಲು ಮಾರ್ಗ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಮತ್ತಷ್ಟು ವೇಗ ದೊರೆತಿದೆ. ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆ (FLS) ಮತ್ತು ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲು ಇಲಾಖೆಯು ಸಂಪೂರ್ಣ ಸಿದ್ಧತೆ ನಡೆಸಿದೆ.

ಯೋಜನೆಯ ಮುಖ್ಯಾಂಶಗಳು:

ಈ ಯೋಜನೆಯ ಒಟ್ಟು ಉದ್ದ: 332 ಕಿ.ಮೀ ಆಗಿದ್ದು, ಅಂದಾಜು ವೆಚ್ಚ: ₹3,300 ಕೋಟಿ ತಗುಲಲಿದೆ. 

ನೇರ ಲಾಭ ಪಡೆಯುವ ಜಿಲ್ಲೆಗಳು: 

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ. ಪ್ರಮುಖ ಸಂಪರ್ಕ ತಾಲೂಕುಗಳು: ಹೊಸನಗರ, ತೀರ್ಥಹಳ್ಳಿ, ಶೃಂಗೇರಿ ಹಾಗೂ ಕಾರ್ಕಳ ನಗರದ ಮೂಲಕ ಹಾದು ಹೋಗಲಿದೆ. 

ಈ ರೈಲ್ವೆ ಮಾರ್ಗವು ಮಲೆನಾಡು ಮತ್ತು ಕರಾವಳಿಯ ನಡುವೆ ವಾಣಿಜ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ.

 ಮಲೆನಾಡಿನ ಭಾಗದ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ಮತ್ತು ಈ ಬೃಹತ್ ಯೋಜನೆಗೆ ಅನುಮೋದನೆ ನೀಡಿದ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ನನ್ನ ಹಾಗೂ ನಮ್ಮ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನ ಸಂಸದರು ತಿಳಿಸಿದ್ದಾರೆ.

ಹುಲಿಕಲ್ ಘಾಟ್ ಗೆ ಭೇಟಿ

ಈ ವರ್ಷ ದುರಂತ ಕಂಡಿರುವ ಹುಲಿಕಲ್ ಘಾಟ್ ಗೂ ಭೇಟಿ ನೀಡಿರುವ ಸಂಸದರು ಪಿಡಬ್ಲೂಡಿಯಿಂದ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ್ದಾರೆ. ಕಾಮಗಾರಿ ವೇಳೆ ಮೂವರ ಬಲಿಪಡೆದಿದ್ದ ಘಾಟಿಯಲ್ಲಿ ವಾಹನ ಸಂಚಾರವನ್ನೇ ಬಂದ್ ಮಾಡಿ ಕಾಮಗಾರಿ ನಡೆಸಲಾಗಿತ್ತು. ತಾತ್ಕಾಲಿಕವಾಗಿ ಬಸ್, ಆಂಬ್ಯೂಲೆನ್ಸ್, ಕಾರುಗಳ ಓಡಾಟಕ್ಕೆ ಜೂ.10 ರಿಂದ ಸಂಚರಿಸಲು ಯೋಗ್ಯವಾಗಲಿರುವುದರಿಂದ ಸಂಸದರ ಭೇಟಿ ಮಹತ್ವ ಪಡೆದುಕೊಂಡಿದೆ. 

ನಂತರ ಶಾಸಕ ಆರಗ ಜ್ಞಾನೇಙದ್ರ ಅವರೊಂದಿಗೆ ಹುಲಿಕಲ್ ಘಾಟಿಯಲ್ಲಿ ಕೆಲಸ ಮಾಡುವ ವೇಳೆ ಮೃತರಾದ ಮೂವರಲ್ಲಿ ಒಬ್ಬರ ಮನೆಗೆ ತೆರಳಿ ಸರ್ಕಾರ ನೀಡಿರುವ ಪರಿಹಾರ ಧನದ ಚೆಕ್ ನ್ನ ವಿತರಿಸಿ ಸಾಂತ್ವಾನ ಹೇಳಿದ್ದಾರೆ. 

Important update from MP on Hulikal Ghati and Railway traffic

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close