SUDDILIVE || SHIVAMOGGA
ಕಸಾಯಿಖಾನೆಗೆ ಹೋಗಬೇಕಿದ್ದ ಗೋವುಗಳ ರಕ್ಷಣೆ- Rescue of cows destined for slaughter
ಕಸಾಯಿ ಖಾನೆಗೆ ತೆರಳಬೇಕಿದ್ದ ಗೋವುಗಳನ್ನ ರಕ್ಷಿಸಿ ಪೊಲೀಸ್ ಠಾಣೆಗೆ ಕಳುಹಿಸಿರುವ ಘಟನೆ ಹರಿಗೆ ಬಳಿ ಸಂಭವಿಸಿದೆ.
ಭದ್ರಾವತಿಯಿಂದ ಶಿವಮೊಗ್ಗದ ಕಸಾಯಿಖಾನೆಗೆ ಗೂಡ್ಸ್ ವಾಹನದಲ್ಲಿ ಎರಡು ಹಸುಗಳನ್ನ ಸಾಗಿಸಲಾಗುತ್ತಿತ್ತು. ಈ ವೇಳೆ ಹಿಂದೂ ಸಂಘಟನೆಯವರ ಖಡಕ್ ಮಾಹಿತಿ ಆಧಾರದಲ್ಲಿ ವಾಹನಗಳನ್ನ ಪೊಲೀಸರು ತಡೆದು ಪರಿಶೀಲಿಸಿದ್ದಾರೆ.
ಪರಿಶೀಲನೆಯ ವೇಳೆ ಹಸುಗಳನ್ನ ಸಾಗಿಸಲು ಬೇಕಾದ ದಾಖಲಾತಿ ಕೊರತೆಯ ಹಿನ್ನಲೆಯಲ್ಲಿ ಕಸಾಯಿಖಾನೆಗೆ ಹೋಗಬೇಕಿದ್ದ ಗೋವುಗಳನ್ನ ರಕ್ಷಿಸಲಾಗಿದೆ. ತುಂಗ ನಗರ ಠಾಣೆಗೆ ರವಾನಿಸಲಾಗಿದೆ.
Rescue of cows destined for slaughter

