SUDDILIVE || SHIVAMOGGA
ಯಡಿಯೂರಪ್ಪನವರ ಖಾಲಿ ಜಾಗದಲ್ಲಿ ಎದ್ದು ಬಿದ್ದು ಹಸುಗಳ ರಕ್ಷಣೆ-Cows stand guard in Yediyurappa's vacant land
![]() |
| ಗೇಟಿನ ಒಳಗೆ ಹೋದರೆ ಯಡಿಯೂರಪ್ಪನವರ ಖಾಲಿ ಜಾಗ |
ಜಿಟಿಜಿಟಿ ಮಳೆಯಲ್ಲಿ ಯಡಿಯೂರಪ್ಪನವರ ಜಾಗದಲ್ಲಿ ಬಿಡಲಾಗಿದ್ದ ಸುಮಾರು 10 ಕ್ಕೂ ಹೆಚ್ಚು ಹಸುಗಳನ್ನ ದೊಡ್ಡಪೇಟೆ ಪೊಲಿಸರು ಎದ್ದು ಬಿದ್ದು ರಕ್ಷಿಸಿದ್ದಾರೆ. ಪೊಲೀಸರು ರಕ್ಷಣೆ ಮಾಡಿರುವುದು ಗಮನಾರ್ಹವಾಗಿದ್ದರೂ ಈ ರಕ್ಷಣೆಯ ಹಿಂದೆ ಹಸು ಮಾಫಿಯಾ ಬಗ್ಗೆ ಹಲವು ಅನುಮಾನಗಳನ್ನ ಹುಟ್ಟಿಹಾಕಿವೆ.
ಎನ್ ಟಿ ರಸ್ತೆಯ ಮ್ಯಾಕ್ಸ್ ಆಸ್ಪತ್ರೆಯ ಎದುರುಗಡೆ ಇರುವ ಬಿಎಸ್ ಯಡಿಯೂರಪ್ಪನವರ ಖಾಲಿ ಎರಡು ಎಕರೆ ಜಾಗದಲ್ಲಿ ಸುಮಾರು 10 ಕ್ಕೂ ಹೆಚ್ಚು ಗೋವುಗಳನ್ನ ತಂದು ಬಿಡಲಾಗಿದೆ. ಹಬ್ಬದ ಹಿನ್ನಲೆಯಲ್ಲಿಯೇ ಈ ಹಸುಗಳನ್ನ ಬಿಡಲಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳದಲ್ಲಿ ನಾಲ್ಕು ಹಸು ಕಟ್ಟು ಹಾಕಿದರೆ ಉಳಿದ 10 ಕ್ಕೂ ಹೆಚ್ಚು ಹಸುಗಳನ್ನ ಬಿಡಲಾಗಿದೆ. ಪೊಲೀಸರು ಹಿಡಿಯಲು ಹೋದಾಗ ಹಸುಗಳು ದಿಕ್ಕಾಪಾಲಾಗಿ ಓಡಿ ಹೋಗಿವೆ. ಆದರೂ ಹಸುಗಳನ್ನ ಸಿಬ್ಬಂದಿಗಳು ಸಬ್ ಇನ್ ಸ್ಪೆಕ್ಟರ್ ಎದ್ದು ಬಿದ್ದು ಹಿಡಿದಿದ್ದಾರೆ.
ಇದೊಂದು ಗೋವುಗಳ ರಕ್ಷಣೆ ಒಳ್ಳೆ ಕೆಲಸ ಎನಿಸಿದರೂ ಹಸುಗಳ್ಳತನದ ಮಾಫೀಯಾಗಳಿಂದಲೇ ಈ ವಿಷಯ ಲೀಕ್ ಆಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಗೋವುಗಳನ್ನ ಹಬ್ಬಕ್ಕೆ ತಂದಿದ್ದಾರೆ ಎಂಬ ಖಚಿತ ಮಾಹಿತಿ ರವಾನೆಯಾಗಿರುವ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿದೆ. ಸ್ಥಳಕ್ಕೆ ಎಸ್ ಡಿಪಿಐ ನವರು ಧಾವಿಸಿದ್ದಾರೆ. ಪಗರಕರಣ ಏನಾಗಲಿದೆ ಕಾದು ನೋಡಬೇಕಿದೆ. ಯಡಿಯೂರಪ್ಪನವರ ಖಾಲಿ ಜಾಗದಲ್ಲಿ ಹಸುಗಳನ್ನ ಬಿಟ್ಟಿದ್ದೇಕೆ ಎಂಬುದು ಸಹ ಕುತೂಹಲ ಹೆಚ್ಚಿಸಿದೆ.
Cows stand guard in Yediyurappa's vacant land

