ಶಾಲೆಯಲ್ಲಿ ಹಿಜಬ್ ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ-ಈಶ್ವರಪ್ಪ- State government has violated High Court order by allowing hijab in schools - Eshwarappa

 SUDDILIVE || SHIVAMOGGA

ಶಾಲೆಯಲ್ಲಿ ಹಿಜಬ್ ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ-ಈಶ್ವರಪ್ಪ- State government has violated High Court order by allowing hijab in schools - Eshwarappa     

High, court

ಆದಿಯೂ ಇಲ್ಲದ, ಅಂತ್ಯವೂ ಇಲ್ಲದ ಸನಾತನ ಹಿಂದೂ ಧರ್ಮವನ್ನ ನಾಶ ಮಾಡುತ್ತೇನೆ ಎಂದು ತಮಿಳುನಾಡಿನ ಮಾಜಿ ಸಿಎಂ ಸ್ಟ್ಯಾಲಿನ್ ಮಗ ಉದಯ ನಿಧಿ ಹೇಳಿಯ ಬಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಅವರ ಮನೆಯಲ್ಲಿ ನಾಶ ಪಡಿಸಿಕೊಳ್ಳಲಿ. ಏಕೆಂದರೆ ಅವರ ತಾಯಿ ಚುನಾವಣ ಸಂದರ್ಭದಲ್ಲಿ ಕೊಲ್ಲೂರಿಗೆ ಬಂದು ತಾಯಿ ಆಶೀರ್ವಾದ ಮಾಡಿಕೊಂಡು ಹೋಗಿದ್ದಾರೆ. ಸನಾತನ ನಾಶ ಎಂದು ಹೇಳಿದ್ದ ಅವರ ಪಕ್ಷ ನಾಶವಾಗಿದೆ. ಈಗ ಮತ್ತೆ ಅವರ ಹೇಳಿಕೆ ಅಸ್ಥಿತ್ವಕ್ಕಾಗಿ ಹೋರಾಟ ಎಂದರು.

ಕಾಶಿ ವಿಶ್ವನಾಥ, ಮಥುರಾ, ಅಯೋಧಗಯ ಸೋಮನಾಥ ದೇವಾಲಯಗಳನ್ನ‌ನಿರ್ನಾಮ ಮಾಡಿ ಮಸೀದಿ ಕಟ್ಟಲಾಗಿದೆಯೋ ಅಲ್ಲಿ ಎಲ್ಲೆಡೆ ದೇವಸ್ಥಾನವಾಗಲಿದೆ. ಪಾಕ್ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನ ಮುಟ್ಟಿ ಅವರವರೆ ಹೊಡೆದಾಡಿಕೊಳ್ಳುತ್ತಿದ್ದಾರೆವೆಂದರು. 

ಮೂರ್ಖತನದ ಹೇಳಿಕೆ ನೀಡಿದ್ದ ಉದಯ ನಿಧಿ ಸ್ಟ್ಯಾಲಿನ್ ಕ್ಷಮೆ ಕೇಳಬೇಕು. ಸನಾತನ ಧರ್ಮವನ್ನ ನಾಶಪಡಿಸಲು ಸಾಧ್ಯವಿಲ್ಲ ಎಂದ ಅವರು ಶಾಲೆಗಳಲ್ಲಿ ಹಿಜಬ್ ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನ ಉಲ್ಲಂಘಿಸಿದೆ. ಸಿಎಂ ಡಿಸಿಎಂ ಏನು ಮಾಡುತ್ತಿದ್ದಾರೆ. ಗುಂಪು ಘರ್ಷಣೆಗೆ ಕಾರಣವಾಗುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ದಾವಣಗೆರೆಯಲ್ಲಿ ಮುಸ್ಲೀಂರಿಗೆ ಟಿಕೇಟ್ ನೀಡದೆ ಅವರ ಕೋಪಕ್ಕೆ ಕಾರಣವಾಗಿದ್ದರು. ಹಿಜಬ್ ಶಾಲೆಯಲ್ಲಿ ಬೇಡ ಎಂದು ಕೋರ್ಟ್ ಆದೇಶಿಸಿ ಅದನ್ನ ಉಲ್ಲಂಘಿಸಲಾಗಿದೆ. ದುರ್ಗ ದೇವಿಯನ್ನ‌ಪೂಜೆ ಮಾಡಿ ಸನಾತನ ನಾಶ ಎಂದು ಹೇಳಿದ ಡಿಎಂಕೆ ಪಕ್ಷ ಮುಳುಗಿಹೋಯಿತೋ ಹಾಗೆ ಕಾಂಗ್ರೆಸ್ ಮುಳಗಲಿದೆ ಎಂದರು. 

ಹಿಜಬ್ ಹಾಕಿಕೊಂಡು ಬಂದರೆ ಎಲ್ಲಾ ಶಾಲಾ ಕಾಲೇಜುಗಳು ಕೇಸರಿ ಮಯವಾಗಲಿದೆ. ಹೈಕೋರ್ಟ್ ಗೆ ರಾಜ್ಯ ಸರ್ಕಾರ ಉತ್ತರಿಸಲಿದೆ. ನಾಳೆ ಬರುವ ಚುನಾವಣೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಮಾತ್ರ ಕೇಸರಿಯಾಗದು ವಿಧಾನ ಸಭೆಯಲ್ಲೂ ಕೇಸರಿ ಮಯವಾಗಲಿದೆ. ಹೈಕೋರ್ಟ್ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಬೇಕು ಎಂದರು. 

ಹೈಕೋರ್ಟ್ ತೀರ್ಪು ಜಾರಿಯಲ್ಲಿದೆ ಸುಪ್ರೀಂಗೆ ಮೇಲ್ಮನವಿ ಹೋಗಲಾಗಿದೆ ಆದರೆ ತಡೆಯಾಜ್ಞೆ ನೀಡಿಲ್ಲ. ಅಲ್ಲಿಯವರೆಗೂ ಹೈಕೋರ್ಟ್ ಜಾರಿಯಾಗಲಿದೆ. ನಾಳೆ ಕೇಸರಿಮಯ ಸರ್ಕಾರ ಬರಲಿದೆ ಎಂದರು. 

https://www.suddilive.in/2026/05/Union-Education-Minister-should-resign-after-NEET-exam-cancellation-R-Prasanna-Kumar.html

State government has violated High Court order by allowing hijab in schools - Eshwarappa  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close