SUDDILIVE || SAGARA
ಆತ್ಮಹತ್ಯೆಯ ಪ್ರಕರಣ ಕೊಲೆಯಾಗಿ ಸಾಬೀತು, ಪತ್ನಿ ಮತ್ತು ಆಕೆಯ ಪ್ರಿಯಕರ ಟೀಪುಡಿ ಮಂಜ ಅಂದರ್- Suicide case proved to be murder, wife and her lover's tea party Manja Andar
ಸಾಗರದಲ್ಲಿ ಇಸ್ತ್ರಿ ಮಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ತಾನೇ ಕುಡಗೋಲಿನಿಂದ ಹೊಟ್ಟೆ ಕೋಯ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪೊಲೀಸರ ವಿಚಾರಣವೇಳೆ ತಿರುವು ಪಡೆದುಕೊಂಡಿದ್ದು ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಹತ್ಯೆ ನಡೆದಿದೆ ಎಙದು ಸಾಬೀತಾಗಿದೆ. ಪ್ರಕರಣದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಸಾಕಷ್ಟು ಸಾಕ್ಷಿ ಸಿಕ್ಕಿ ಇಬ್ಬರ ಬಂಧನವಾಗಿದೆ.
ಸಾಗರದಲ್ಲಿ ಪರಶುರಾಮ್ ಮತ್ತು ಚೈತ್ರ ಎಂಬುವರು 15 ವರ್ಷದ ಹಿಂದೆ ಮದುವೆಯಾಗಿದ್ದು ಜೆಪಿ ನಗರದಲ್ಲಿ ಇಸ್ತ್ರಿ ಮಾಡಿಕೊಂಡು ಸಹಜ ಜೀವನ ನಡೆಸುತ್ತಿದ್ದು. ಏ.15 ರಂದು ರಾತ್ರಿ ಮಲಗುವಾಗ ಪತಿ ಪತ್ನಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ನಂತರ ಪತಿ ಪರಶುರಾಮ್ ಮದ್ಯ ಸೇವಿಸಿಕೊಂಡು ಬಂದು ಮತ್ತೆ ಲೈಂಗಿಕತೆಗೆ ಒತ್ತಾಯಿಸಿದಾಗ ಪತ್ನಿ ನಿರಾಕರಿಸುತ್ತಾಳೆ.
ಪತ್ನಿ ನಿರಾಕರಿಸಿದ ಕಾರಣ ಪತಿ ಕೋಣೆಗೆ ಹೋಗಿ ಕೊಡಗೋಲಿನಿಂದ ಹೊಟ್ಟೆ ಕೋಯ್ದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಾಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹೇಳಿಕೆಯ ಆಧಾರದ ಮೇರೆಗೆ ಅಸಹಜ ಸಾವು ಎಂದು ದಾಖಲಾಗಿತ್ತು. ಆದರೆ ಮೃತ ಪರಶುರಾಮ್ ಅವರ ಸಹೋದರ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿ ಸೊರಬಪೊಲೀಸ್ ಠಾಣೆಯಲ್ಲಿ ಇದೊಂದು ಕೊಲೆ ಎಂದು ದೂರು ನೀಡಿರುತ್ತಾರೆ.
ಎಂದಿನಂತೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪಿಎಸ್ಐ ಶಾಂತರಾಜು ಅವರಿಗೆ ಇಲ್ಲ ಇದೊಂದು ಕೊಲೆ ಎಂದು ಸಾಬೀತು ಪಟ್ಟ ಹಿನ್ನಲೆಯಲ್ಲಿ ಚೈತ್ರ ಮತ್ತು ಆಕೆಯ ಸ್ನೇಹಿತ ಮಂಜುನಾಥ್ ಯಾನೆ ಟೀಪುಡಿ ಮಂಜನೇ ಕೊಲೆಗಾರರು ಎಂದು ಸಾಬೀತಾಗಿದೆ.
ಏ.15 ರಂದು ಪತಿ ಪರಶುರಾಮ್ ಮತ್ತು ಚೈತ್ರಳ ನಡುವೆ ಸೆಕ್ಸ್ ವಿಚಾರದಲ್ಲಿ ಗಲಾಟೆಯಾಗಿದೆ. ಈ ವೇಳೆ ಟೀಪುಡಿ ಮಂಜ ಮದ್ಯಪ್ರವೇಶಿಸಿದ್ದು ಪರಶುರಾಮ ಮತ್ತು ಟೀಪುಡಿ ಮಂಜನ ನಡುವೆ ಗಲಾಟೆಯಾಗಿದೆ. ಮಂಜ ಕುಡಗೋಲಿನಿಂದ ಹತ್ಯೆ ಮಾಡಿರುವುದಾಗಿ ಪೊಲೀಸರ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ. ಈ ವೇಳೆ ನಾಟಕವಾಡಿ ಚೈತ್ರ ಮತ್ತು ಟೀಪುಡಿ ಮಂಜ ಪರಶುರಾಮ್ ನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.
ಹೀಗಾಗಿ ಚೈತ್ರ ಮತ್ತು ಟೀಪುಡಿ ಮುಂಜನ ಜೊತೆ ಹಳೆಯ ಒಪ್ಪಿತ ಸಂಬಂಧ ಇದ್ದಿದ್ದರಿಂದ ಪರಶುರಾಮ್ ಮತ್ತು ಪತ್ನಿ ಚೈತ್ರಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಗಲಾಟೆ ಏ.15 ರಂದು ದೊಡ್ಡಮಟ್ಟಕ್ಕೆ ನಡೆದು ಪತ್ನಿ ಮತ್ತು ಸ್ನೇಹಿತನ ನಡುವಿನ ಸ್ನೇಹ ಪತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ನಿನ್ನೆ ಎಸ್ಪಿ ನಿಖಿಲ್ ಸ್ಥಳ ಮಹಜರ್ ಮಾಡಿದ್ದಾರೆ.
Suicide case proved to be murder, wife and her lover's tea party Manja Andar


