SUDDILIVE || SHIVAMOGGA
ಹಿಂದೂ ಸಂಘಟನೆಯವರ ಪ್ರಕರಣ ಹಿಂಪಡೆದಿರುವ ಬಗ್ಗೆ SDPI ಪ್ರತಿಭಟನೆ- SDPI protests over withdrawal of Hindu organization's case
ಸಂಘ ಪರಿವಾರದವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸುವುದುನ್ನ ಕೈ ಬಿಡಬೇಕು ಎಂದು ಆಗ್ರಹಿಸಿ ಇಂದು ಎಸ್ ಡಿ ಪಿ ಐ ಜಿಲ್ಲಾಧಿಕಾರಿಗಳ ಕಚೇರಿಯಾದರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಕರ್ನಾಟಕ ಸರ್ಕಾರ, ಸಂಘ ಪರಿವಾರವನ್ನು ಸಮಾಧಾನ ಪಡಿಸುವ ಉದ್ದೇಶದೊಂದಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಚೈತ್ರ ಕುಂದಾಪುರ ಆಂದೋಲ ಸ್ವಾಮಿಸುವವರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿರುವ ನಿರ್ಧಾರ ತತ್ವಗಳ ಮೇಲಿನ ನೇರ ದಾಳಿಯಾಗಿದೆ ಎಂದು ಎಸ್ ಡಿ ಪಿ ಐ ಮನವಿಯಲ್ಲಿ ಆರೋಪಿಸಿದೆ.
ಹಾಗಾಗಿ ಈ ಕೂಡಲೇ ತನ್ನ ನಿರ್ಧಾರವನ್ನು ರದ್ದುಪಡಿಸಿ ಪ್ರಕರಣಗಳಲ್ಲಿ ಇರುವ ಗೂಂಡಾಗಳಿಗೆ ಕಾನೂನಾತ್ಮಕ ಸೂಕ್ತ ಶಿಕ್ಷೆ ಆಗುವಂತೆ ಕ್ರಮ ಜರುಗಿಸಲು ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಮುತಾಲಿಕ್ ಹಾಗೋ ಚೈತ್ರ ಕುಂದಾಪುರವರಂತಹ ಕೋಮು ಕ್ರಿಮಿಗಳ ಮೇಲೆ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಯಾವ ಗುಪ್ತ ರಾಜಕೀಯ ಅಜೆಂಡ ಜಾರಿಗೆ ತರಲು ಪುನಾರ ನಡೆಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ದ್ವೇಷ ರಾಜಕಾರಣಕ್ಕೆ ರಕ್ಷಣೆ ನೀಡಿ ಅಮಾಯಕ ಸಂಖ್ಯಾತರು ಮತ್ತು ದಲಿತರನ್ನು ಟಾರ್ಗೆಟ್ ಮಾಡುವ ನೀತಿಯನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ ಆದ್ದರಿಂದ ಈ ಜನವಿರೋಧಿ ನಿರ್ಧಾರವನ್ನು ತಕ್ಷಣ ಸಿಂಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಜಿಲಾನ್ ಇಮ್ರಾನ್ ನಗರಧ್ಯಕ್ಷ ಮಂಜೂರ್ ಅಲಿಖಾನ್ ರಹೀಮ್ ಖಾನ್ ಸಾಧಿಕ್ ಮೊದಲಾದವರು ಭಾಗಿಯಾಗಿದ್ದರು.
SDPI protests over withdrawal of Hindu organization's case

