SUDDILIVE || SHIVAMOGGA
ಅನುಮಾನ ಸ್ಪದವಾಗಿ ಗೋವುಗಳ ಸಾಗಾಣಿಕೆ-ಕಸಾಯಿ ಖಾನೆಗೆ ಬದಲು ಠಾಣೆಗೆ ರವಾನೆ-Suspicious transportation of cows - sent to police station instead of slaughterhouse
ಸಾಗರ ರಸ್ತೆಯ ಶಿವರಾಂಪುರದಲ್ಲಿ ಅನುಮಾನ ಪದವಾಗಿ ಬಂದ ವಾಹನವನ್ನು ತಡೆದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಪಾಸಣೆ ನಡೆಸಿದಾಗ ಕಸಾಯಿ ಖಾನೆಗೆ ಹೋಗುತ್ತಿದ್ದ ಆರು ಹಸುಗಳನ್ನು ಬಚಾವ್ ಮಾಡಿದ್ದಾರೆ.
ಶ್ರೀರಾಂಪುರ ಬಡಾವಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಯುವಕರು ರಸ್ತೆ ಬದಿ ನಿಂತಿಕೊಂಡಿದ್ದಾಗ ಕೆಎ 404 ಎ 0967 ನಂಬರ್ ನ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದು ಅನುಮಾನ ಸ್ಪದವಾಗಿ ಬರುತ್ತಿತ್ತು. ಹಿಂದೂ ಜಾಗರಣ ವೇದಿಕೆ ಯುವಕರು ಈ ವಾಹನವನ್ನು ತಡೆದು ಪರಿಶೀಲಿಸಿದಾಗ ಹಿಂಸಾತ್ಮಕವಾಗಿ ಆರು ಹಸುಗಳನ್ನು ತುಂಬಿಸಿಕೊಂಡು ಹೋಗುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹಸು ಸಾಗಾಣಿಕೆಗೆ ಬೇಕಾದ ದಾಖಲಾತಿಗಳನ್ನು ಕೇಳಿದಾಗ ಗೂಡ್ಸ್ ವಾಹನ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಹಿಂದೂ ಜಾಗರಣೆ ವೇದಿಕೆಯ ಹುಡುಗರು 112 ಸಂಖ್ಯೆಗೆ ಕರೆ ಮಾಡಿದ್ದಾರೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ತುಂಗ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಕಾರ್ಗಲ್ ನಿಂದ ಹೊರಟ ಗೂಡ್ಸ್ವಾಹನವು ತುಮಕೂರಿನ ಬಳಿ ತೆರಳುತ್ತಿರುವುದು ತಿಳಿದು ಬಂದಿದೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
Suspicious transportation of cows - sent to police station instead of slaughterhouse
