SUDDILIVE|| SHIVAMOGGA
22 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ- 22-year-old sentenced to 20 years
2022ನೇ ಸಾಲಿನಲ್ಲಿ ಭದ್ರಾವತಿಯ ವಾಸಿ 22 ವರ್ಷದ ಯುವಕನು, 15 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಜೀತೇಂದ್ರಕುಮಾರ್ ದಯಾಮಾ ಐಪಿಎಸ್, ಎಎಸ್‌ಪಿ ಭದ್ರಾವತಿ ಉಪ ವಿಭಾಘ ರವರು ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ರವರು ದಿನಾಂಕ: 08-05-2026 ರಂದು ಆರೋಪಿತನಿಗೆ 20 ವರ್ಷ ಕಠಿಣ ಸಜೆ ಮತ್ತು 2,50,000 ರೂ ದಂಡವನ್ನು ವಿಧಿಸಿ, ನೊಂದ ಬಾಲಕಿಗೆ 2,25,000/- ರೂ ಪರಿಹಾರವನ್ನು ನೀಡಿ ಆದೇಶಿಸಿರುತ್ತಾರೆ.
22-year-old sentenced to 20 years
