SUDDILIVE || SHIVAMOGGA
ಒಂದೂ ಕನ್ನಡ ಶಾಲೆಗಳಿಗೆ ಅನುದಾನ ನೀಡಿ, ಇಲ್ಲ ಅನುದಾನ ನೀಡಿಲ್ಲ ಎಂದು ಘೋಷಿಸಿ-ಸಚಿವರಿಗೆ ಸವಾಲು ಎಸೆದ ಒಕ್ಕೂಟ-The coalition challenged the minister by declaring that it would either provide grants to Kannada schools or not provide them
1995ರ ನಂತರದ ಕನ್ನಡ ಶಾಲೆ ಗಳನ್ನು ಉಳಿಸುವಂತೆ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷ ಬಿಸಿ ಶಿವಪ್ಪ 1995ನೇ ಸಾಲಿನ ನಂತರ ಆರಂಭವಾದ ಕನ್ನಡ ಶಾಲೆಗಳ ಶಿಕ್ಷಕರಿಗೆ ಇತರೆ ಗ್ಯಾರಂಟಿಯ ಜೊತೆ ವೇತಾನುದಾನ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು. ಕನ್ನಡ ಶಾಲಾ ಹಾಗೂ ಕಾಲೇಜುಗಳು ಆರಂಭಗೊಂಡು ಮೂವತ್ತು ವರ್ಷ ಕಳೆದರೂ ಸಹ ಸರ್ಕಾರ ಅನುದಾನ ನೀಡದೆ ಈ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
2025 26 ನೇ ಸಾಲಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಬಜೆಟ್ ನಲ್ಲಿಯ ಹಣ ತೆಗೆದು ಇಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರು ಕೇವಲ ಭರವಸೆಯಾಗಿ ಅದು ಉಳಿದುಕೊಂಡಿದೆ. ಈ ಬಗ್ಗೆ ನೋವು ತೋಡಿಕೊಂಡಿರುವ ಅವರು ಅನೇಕ ಸಾಹಿತಿಗಳನ್ನು ಕಾಲಿಡಿದುಕೊಂಡಿರುವ ಕೆಲಸವಾಗಿರಲಿಲ್ಲ ಈಗಿನ ಶಿಕ್ಷಣ ಸಚಿವರು ಮಾಜಿ ಮುಖ್ಯಮಂತ್ರಿಗಳ ಮಗರಾಗಿದ್ದು ಈ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಒಂದು ವೇಳೆ ನೀವು ಕನ್ನಡ ಶಾಲೆಗಳಿಗೆ ಅನುದಾನವನ್ನು ಕೊಡಿಸದಿದ್ದರೂ ಮಾಧ್ಯಮಗಳ ಮುಂದೆ ಬಂದು ಕನ್ನಡ ಶಾಲೆಗಳಿಗೆ ಅನುದಾನ ನೀಡುವುದಿಲ್ಲ ವೆಂದು ಆದರೂ ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ. ಈ ರೀತಿ ಹೇಳುವುದರಿಂದ ನಾವು ಕನ್ನಡ ಶಾಲಾ ಶಿಕ್ಷಕರು ಈ ಹುದ್ದೆಯನ್ನು ಬಿಟ್ಟು ಬೇರೆ ಹುದ್ದೆಯನ್ನು ಕಂಡುಕೊಳ್ಳಲು ಅನುಕೂಲವಾಗಲಿದೆ ಎಂದು ಸಹ ಸ್ಪಷ್ಟನೆ ನೀಡಿದ್ದಾರೆ. ಕೊನೆಯದಾಗಿ ಎಚ್ಚರಿಸಿರುವ ಅವರು ಬೆಳಗಾವಿ ಬಜೆಟ್ ಆಗುವುದರೊಳಗಾಗಿ ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕೆಂದು ಮತ್ತೊಮ್ಮೆ ವಿನಂತಿಸಿದ್ದಾರೆ.
ಕನ್ನಡ ಶಾಲೆ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡದಿದ್ದರೆ ಜೂ.5 ರಂದು ಪರಿಸರ ದಿನಾಚರಣೆಯ ದಿನದಂದು ಶಿಕ್ಷಣ ಸಚಿವರನ್ನೇ ಮುತ್ತಿಗೆ ಹಾಕುವುದಾಗಿ ಆಗ್ರಿಸಿದರು.
The coalition challenged the minister by declaring that it would either provide grants to Kannada schools or not provide them

