SUDDILIVE || SHIVAMOGGA
ಗೋಕಳ್ಳಸಾಗಾಣಿಕೆ, ಓರ್ವ ಬಂಧನ-Cow smuggling, one arrested
ಶಿವಮೊಗ್ಗದಲ್ಲಿ ನಿನ್ನೆ ಗೂಡ್ಸ್ ವಾಹನದಲ್ಲಿ ಹಸುಗಳನ್ನ ರಕ್ಷಿಸಲಾಗಿದ್ದು, ರಕ್ಷ ವೇಳೆ ಹಿಂದೂ ಜಾಗರಣ ವೇದಿಕೆಯ ಯುವಕರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಕ್ರೀದ್ ಹಬ್ಬಕ್ಕೆ ಗೋವುಗಳ ಸಾಗಾಣಿಕೆ ಹೆಚ್ಚಾಗಿದ್ದು ಅವುಗಳ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಿದ್ದರು ಅವುಗಳನ್ನ ಕದ್ದು ಮುಚ್ಚಿ ಸಾಗಾಟ ಮಾಡುವ ಪ್ರಯತ್ನ ನಡೆಯುತ್ತಿದೆ.
ನಿನ್ನೆ ರಾತ್ರಿ ಭದ್ರಾವತಿಯಿಂದ ಗೂಡ್ಸ್ ವಾಹನದಲ್ಲಿ ನಾಲ್ಕು ಹಸುಗಳನ್ನ ಹೊತ್ತು ಶಿವಮೊಗ್ಗದ ಸೂಳೆಬೈಲಿಗೆ ಬಂದ ವಾಹನವನ್ನ ತಡೆದು ಪರಿಶೀಲಿಸಲಾಗಿದೆ. ಈ ವೇಳೆ ಸ್ಥಳೀಯರು ಸಹ ಆಕ್ಷೇಪಿಸಿದ್ದಾರೆ.
ಈ ವೇಳೆ ಸ್ಥಳೀಯರು ಮತ್ತು ಹಿಂಜಾವೇ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ತುಂಗನಗರ ಪೊಲೀಸರ ಅಗಮನದಿಂದ ಪರಿಸ್ಥಿತಿಳಿಗೊಂಡಿದೆ. ಗೋವುಗಳನ್ನ ಹತ್ತಿರದ ಗೋಶಾಲೆಗೆ ಬಿಡಲಾಗಿದೆ. ಗೂಡ್ಸ್ ವಾಹನದ ಚಾಲಕ ಸುಮನ್ ಎಂಬಾತನನ್ನ ಬಂಧಿಸಲಾಗಿದೆ.
Cow smuggling, one arrested

