SUDDILIVE || BHADRAVATHI
ಜಾಗದ ವಿಚಾರದಲ್ಲಿ ನಡೆದ ಡ್ರಾಮಾ ಹೈಡ್ರಾಮಾ-The drama and hydram over land dispute
ಭದ್ರಾವತಿ ತಾಲೂಕು ಸಿರಿಯೂರು ಗ್ರಾಮದಲ್ಲಿ ನಡೆದ ಡ್ರಾಮಾ ಹೈಡ್ರಾಮದಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಸಿರಿಯೂರು ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ನಡೆದ ಘಟನೆಯಲ್ಲಿ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಗ್ಲಾಜುಗಳು ಪೀಸ್ ಪೀಸ್ ಆಗಿವೆ.
ಮೇ.21 ರಂದು ಸಿರಿಯೂರು ಗ್ರಾಮದಲ್ಲಿ ಸರ್ವೆ ನಂಬರ್ 13 ರಲ್ಲಿ 110×35 ಜಾಗದಲ್ಲಿ ಮೀನಾಕ್ಷಿ ಎಂಬುವರು ಮನೆ ಕಟ್ಟಿಕೊಂಡಿದ್ದರು. ಮಣ್ಣಿನ ಮನೆಯನ್ನ ಕೆಡವಿ ಹೊಸದಾಗಿ ಮನೆ ಕಟ್ಟಿಕೊಳ್ಳಲು ಮುಂದಾದಾಗ ಇವರ ಮನೆಯ ಹಿಂಭಾಗದಲ್ಲಿದ್ದ ಶಿವಣ್ಣ ಎಂಬುವರು ತಕರಾರು ತೆಗೆದು ಗ್ರಾಮಪಂಚಾಯಿತಿ ಪಿಡಿಒಗೆ ದೂರು ನೀಡಿದ್ದರು. ಗ್ರಾಪಂ ಪಿಡಿಒ ಸ್ಥಳ ವೀಕ್ಷಣೆ ಮಾಡಿ ತಪಾಸಣೆ ನಡೆಸಿದಾಗ ಮೀನಾಕ್ಷಿ ಬಾಯಿಗೆ ನಿಮ್ಮ ಅಳತೆ ಸರಿಯಾಗಿದೆ ಎಂದು ಹೇಳಿ ಪಂಚಾಯಿತಿಗೆ ಬರುವಂತೆ ಹೇಳಿದ್ದರು.
ಅಷ್ಟರಲ್ಲಿ ಶಿವಣ್ಣ ಗಡಿಕಂಬವನ್ನ ಒಡೆದು ಇದ್ದುಬದ್ದವರಿಗೆ ಬೈಯಲು ಶುರು ಮಾಡಿದ್ದನು. ಈ ಬಗ್ಗೆ ದೂರು ದಾಖಲಾಗಿದ್ದರಿಂದ ಈತನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಷ್ಟರಲ್ಲಿ ಶಿವಣ್ಣ ಎದೆನೋವಿನಿಂದ ಕುಸಿದು ಬಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದನು. ಮೊನ್ನೆ ರಾತ್ರಿ ದಾಖಲಾಗಿದ್ದ ಶಿವಣ್ಣ ತುರ್ತು ವಿಭಾಗದಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದ.
ವಾರ್ಡ್ ನಲ್ಲಿದ್ದ ಶಿವಣ್ಣನಿಗೆ ವೈದ್ಯರು ಫಿಟ್ ನೆಸ್ ಸರ್ಟಿ ಫಿಕೇಟ್ ನೀಡಿದ ಮೇಲೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿತ್ತು. ಈ ಮಧ್ಯೆ ಶಿವಣ್ಣ ವಾಶ್ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ವಾಶ್ ರೂಮ್ ನ ಗ್ಲಾಜುಗಳನ್ನ ಒಡೆದು ಅವಾಂತರ ಸೃಷ್ಠಿಸಿದ್ದಾನೆ. ಈ ಮಧ್ಯೆ 15-20 ಜನ ಶಿವಣ್ಣನ ಕಡೆಯವರು ಪೊಲೀಸರೆ ಶಿವಣ್ಣನಿಗೆ ಹೊಡೆದಿದ್ದಾರೆ ಎಂದು ಸೀನ್ ಕ್ರಿಯೇಟ್ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಈ ಘಟನೆಯನ್ನ ಪೊಲೀಸರು ಹೇಗೆ ಪರಿಗಣಿಸುತ್ತಾರೆ ಕಾದು ನೋಡಬೇಕಿದೆ.
The drama and hydram over land dispute


