ಸಾರ್ವಜನಿಕ ಸ್ಥಳಗಳನ್ನ ಅಡ್ಡಹಾಕಿದವರ ಗ್ರಹಚಾರ ಬಿಡಿಸಬೇಕಿದೆ-Those who obstruct public places must be punished

SUDDILIVE || SHIVAMOGGA

ಸಾರ್ವಜನಿಕ ಸ್ಥಳಗಳನ್ನ ಅಡ್ಡಹಾಕಿದವರ ಗ್ರಹಚಾರ ಬಿಡಿಸಬೇಕಿದೆ-Those who obstruct public places must be punished    





ಕೆಲವದು ಏರಿಯಾಗಳಲ್ಲಿನ ಸಾರ್ವಜನಕ ಸ್ಥಳಗಳಲ್ಲಿ ಓಡಾಡಲು ಕೆಲವರ ದೊಣ್ಣನಾಯಕನ ಅಪ್ಪಣೆ ಪಡೆಯುವಂತಾಗಿದೆ. ಸಾರ್ವಜನಿಕರು ಓಡಾಡುವ ಸ್ಥಳಗಳನ್ನ ಅಡ್ಡಕಟ್ಟಿ ಪ್ರಜಾಪ್ರಭುತ್ವಕ್ಕೆ ಸವಾಲು ಎಸೆಯುವ ಕೆಲಸಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. 

ಉದಾಹರಣೆಗೆ ಬಹುಮಹಡಿ ಕಟ್ಟದ ಎದುರಿನ ಸ್ಥಳದಲ್ಲಿ ಹೂವಿನ ಅಂಗಡಿಗಳನ್ನ  ರಸ್ತೆಯ ಜಾಗವನ್ನ ಒತ್ತುವರಿ‌ಮಾಡಿಕೊಂಡು ವ್ಯಾಪಾರ ಮಾಡಲಾಗುತ್ತಿತ್ತು. ಕೇಳಿದರೆ ಜೀವನೋಪಯ ಎಂಬ ಬುರುಡೆಗಳನ್ನ ಬಿಡಲಾಗುತ್ತಿತ್ತು. ರಸ್ತೆಯನ್ನ ಕಿರಿಯದಾಗಿಸುವ ಪ್ರಯತ್ನ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಸಗುತ್ತಿತ್ತು.  ಇದಕ್ಕೆ ಕೆಲವರ ಕುಮ್ಮಕ್ಕು ದೊರೆತ ಪರಿಣಾಮ ಸಾರ್ವಜನಕರ ಸ್ಥಳಗಳನ್ನ ಒತ್ತುವರಿ ಮಾಡಿಕೊಂಡು ಅಟ್ಟಹಾಸ ಮೆರೆಯಲಾಗಿತ್ತು. 


ಸಿಪಿಐ ದೇವರಾಜ್ ಅಂತಹ ಪೊಲೀಸ್ ಇನ್ ಸ್ಪೆಕ್ಟರ್ ಗಳ ಸತತ ಪ್ರಯತ್ನದಿಂದ ಈ ಸ್ಥಳ ತೆರವುಗೊಂಡಿದೆ. ಅದರಂತೆ ಈಗ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಪಕ್ಕದಲ್ಲಿಯೇ ಇರುವ ಹೂವಿನ ಮಾರುಕಟ್ಟೆಗೆ ಓಡಾಡಲು ಸಾರ್ವಜನಿಕರ ರಸ್ತೆಯನ್ನ ಅಡ್ಡಕಟ್ಟಲಾಗಿದೆ. ಇಂತಹದ್ದೊಂದು ವಿಡಿಯೋವನ್ನ ಸಾರ್ವಜನಿಕರು ಸುದ್ದಿಲೈವ್ ಗೆ ನೀಡಿದ್ದಾರೆ. 

ಈ ಜಾಗ ಸಾರ್ವಜನಿಕರು ಓಡಾಡಲು ಇದ್ದರೆ ಇದನ್ನ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರು ಅನುಕೂಲ ಮಾಡಿಕೊಡಬೇಕು. ಕೆಲ ಬಸ್ ಏಜೆಂಟರು ಈ ರಸ್ತೆಯನ್ನ ತಡೆದಿರುವ ಬಗ್ಗೆ ಸಾರ್ವಜನಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ‌ ಅಡ್ಡಕಟ್ಟುವಿಕೆ ಕೆಲಸ ನಿರಂತರವಾಗಿ ನಡೆಯಿತ್ತಿದೆ ಎಂಬ ದೂರುವಿದೆ. ಈ ಜಾಗವನ್ನ ಪ್ರಾಧಿಕಾರ ಪರಿಶೀಲಿಸಿ ಒಂದು ವೇಳೆ ಇದು ಸಾರ್ವಜನಿಕರ ಸ್ಥಳವೇ ಅದರೆ ಸಾರ್ವಜನಿಕರ ಸ್ಥಳದಲ್ಲಿ ಪಬ್ಲಿಕ್ ಗೆ ಅಡ್ಡಿ ಪಡಿಪಡಿಸುವ ದೊಣ್ಣೆ ನಾಯಕರನ್ನ‌ ಒದ್ದು ಒಳಗೆ ಹಾಕಿ ಓಡಾಡಲು ಅನುವು ಮಾಡಿಕೊಡಬೇಕಿದೆ. 

Those who obstruct public places must be punished    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close