SUDDILIVE || SHIVAMOGGA
ಜನವರಿಯಲ್ಲಿ ನಾಪತ್ತೆಯಾದ ಮಹಿಳೆ ಇದುವರೆಗೂ ಪತ್ತೆಯಾಗಿಲ್ಲ- The woman who went missing in January has not been found yet
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಸೋಗಿ ಗ್ರಾಮದ ಬಲವೀಂದ್ರಪ್ಪ ಎಂಬುವವರ ಪತ್ನಿ 30 ವರ್ಷದ ದೀಪಾ ಎಂಬ ಮಹಿಳೆ ಜನವರಿ 2026 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈಕೆಯ ಚಹರೆ 5.00 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತಾನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಧರಿಸಿರುತ್ತಾರೆ
ಈ ಮಹಿಳೆಯ ಕುರಿತು ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ದೂ.ಸಂ.: 8722983310/ 9480803367 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
The woman who went missing in January has not been found yet
