SUDDILIVE || SHIVAMOGGA|| HOSANAGARA|| SAGARA|| SHIKARIPURA|| THIRTHAHALLI || BHADRAVATHI
ಶಿಕಾರಿಪುರದಲ್ಲಿ ರಾಯರ ಮಠಕ್ಕೆ ನುಗ್ಗಿದ ನೀರು, ಭದ್ರಾವತಿಯಲ್ಲಿ ಮಳೆಯ ನಡುವೆ ಸಂಭವಿಸಿದ ರಸ್ತೆ ಅಪಘಾತ, ಓರ್ವ ಸಾವು-Water enters Rayara Mutt in Shikaripura, road accident occurs in Bhadravati amidst rain, one dies
ಇಂದು ಬೆಳಿಗ್ಗೆಯಿಂದ ಜಿಲ್ಲೆಯ ಬಹತೇಕ ತಾಲೂಕಿನಲ್ಲಿ ಮಳೆ ಭರ್ಜರಿಯಾಗಿ ಸುರಿದಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ಅರ್ಧಗಂಟೆಯಲ್ಲಿ ಭಾರಿ ಗಾಳಿ, ಸಿಡಿಲು, ಮಿಂಚಿನ ಸಮೇತ ಮಳೆಯಾಗಿದೆ.
ಮಳೆಯ ಹಿನ್ನಲೆಯಲ್ಲಿ ಸಧ್ಯಕ್ಕೆ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಹೊಸನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಶನಿವಾರ ಸಂಜೆ ಸುರಿದ ಭಾರಿ ಗಾಳಿ-ಮಳೆಗೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಹಾರಿದ ಹೋಗಿರುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ, ಘಟನೆ ನಡೆದಿದೆ.
ಭಾರೀ ಗಾಳಿಯ ತೀವ್ರತೆಗೆ ಸಭಾಂಗಣದ ಮೇಲ್ಭಾಗಕ್ಕೆ ಅಳವಡಿಸಲಾಗಿದ್ದ ಟಿನ್ ಶೀಟ್‌ಗಳು ಹಾಗೂ ಕಬ್ಬಿಣದ ಆಂಗಲರ್‌ಗಳು ಎಗರಿ ಕೆರೆಹಳ್ಳಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ರಾಯರ ಮಠಕ್ಕೆ ನೀರು ನುಗ್ಗಿದೆ
ಇಂದು ಸುರಿದ ಭಾರಿ ಮಳೆಯಿಂದಾಗಿ ಶಿಕಾರಿಪುರ ಪಟ್ಟಣದ ಹುಚ್ಚರಾಯ ದೇವಸ್ಥಾನ ಬಳಿಯಿರುವ ಶ್ರೀಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಹಾಗೂ ಒಳಭಾಗಕ್ಕೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಸ್ಥಳಕ್ಕೆ ಕಾಂಗ್ರೆಸ್ ನ ಧುರೀಣ ಎಸ್ ಪಿ ನಾಗರಾಜ್ ಧಾವಿಸಿ ಪರಿಶೀಲಿಸಿದ್ದಾರೆ.
ಪೂಜನೀಯ ಸ್ಥಳವಾದ ಮಠದೊಳಗೆ ನೀರು ನಿಂತಿರುವುದರಿಂದ ಭಕ್ತಾದಿಗಳಿಗೆ ಹಾಗೂ ಮಠದ ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತಿರುವುದನ್ನು ಕಂಡು, ತಕ್ಷಣವೇ ಸಂಬಂಧಪಟ್ಟ ಪುರಸಭೆ ಹಾಗೂ ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಸೂಚನೆಗಳನ್ನು ನೀಡಲಾಯಿತು.
ಮಠದೊಳಗೆ ಇರುವ ನೀರನ್ನು ಕೂಡಲೇ ಪಂಪ್‌ಸೆಟ್‌ಗಳ ಮೂಲಕ ಖಾಲಿ ಮಾಡಿಸಿ ಚರಂಡಿಗಳ ಬ್ಲಾಕೇಜ್ ಗಳನ್ನು ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ಸಹಾಯದಿಂದ ಸರಿಪಡಿಸಿದ್ದಾರೆ. ಇದನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಭದ್ರಾವತಿಯಲ್ಲಿ ಅಪಘಾತ
ಸಂಜೆ ಸುಮಾರಿಗೆ ಭದ್ರಾವತಿಯಲ್ಲಿ ಸುರಿದ ಮಳೆ ಸುರಿದಿದೆ. ಮಳೆಯ ವೇಳೆ ತರೀಕೆರೆ ರಸ್ತೆಯ ಫ್ಲೈಓವರ್ ಬಳಿ ಎರಡು ಬೈಕ್ ಗಳ ನಡುವೆ ಮುಕಾಮುಖಿ ಡಿಕ್ಕಿಯಲ್ಲಿ ನಾಗರಾಜ್(48) ಎಂಬುವರು ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತಿದ್ದ ಇವರ ಸಹೋದರರ ಮಗಳಿಗೆ ತೀವ್ರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಲ್ಯಾಣ ನಗರದಿಂದ ನೆಹರೂ ನಗರದಲ್ಲಿರುವ ಸಂಬಂಧಿಕರ ಮನೆಗೆ ನಾಗರಾಜ್ ಸಹೋದರನ ಮಗಳನ್ನ ಕೂರಿಸಿಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಭದ್ರಾವತಿ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಗರದಲ್ಲೂ ಭಾರಿ ಮಳೆಯಾಗಿದ್ದು ಜಡ್ಡನಕೊಪ್ಪದಲ್ಲಿ ಮಂಜುನಾಥ ಎಂಬುವರ ಮನೆಯ ಮೇಲೆ ಮರ ಬಿದ್ದಿದೆ. ಅನಾಹುತಗಳ ಬಗ್ಗೆ ಇನ್ನೂ ವರದಿ ಬರಬೇಕಿದೆ.
Water enters Rayara Mutt in Shikaripura, road accident occurs in Bhadravati amidst rain, one dies



