ತೀರ್ಥಹಳ್ಳಿಯ ಅನಘ ರಾಜ್ಯದ ಪ್ರಥಮ ಸ್ಥಾನ ಪಡೆದವರ ಪಟ್ಟಿಗೆ-Theerthahalli's Anagha is on the list of first place winners in the state.

 SUDDILIVE || SHIVAMOGGA

ತೀರ್ಥಹಳ್ಳಿಯ ಅನಘ ರಾಜ್ಯದ ಪ್ರಥಮ ಸ್ಥಾನ ಪಡೆದವರ ಪಟ್ಟಿಗೆ-Theerthahalli's Anagha is on the list of first place winners in the state.      

Theerthahhalli, anagha

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದ ಇಲ್ಲಿನ ವಾಗ್ದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕೆ.ಎಸ್. ಅನಘಾ ಅವರು ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.  

ಇದರಿಂದ ರಾಜ್ಯದಲ್ಲಿ ಪ್ರಥಮ ಸ್ಥಾನ  ಪಡೆದುಕೊಂಡಿದ್ದ 17 ವಿದ್ಯಾರ್ಥಿಗಳ ಪಟ್ಟಿಗೆ ಅನಘ ಸೇರ್ಪಡೆಗೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ 18 ಜನ ಪ್ರಥಮ ಸ್ಥಾನ ಪಡೆದುಕೊಂಡವರಾಗಿದ್ದಾರೆ. ಕಳೆದ ವರ್ಷ 22 ಜನ ಪ್ರಥಮ ಸ್ಥಾನ ಪಡೆದಿದ್ದರು. 

ಅನಘಾ ಅವರು ಸಮಾಜ ವಿಜ್ಞಾನ ವಿಷಯದಲ್ಲಿ 99 ಅಂಕ ಗಳಿಸಿದ್ದರು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಪ್ರಕಟವಾಗಿರುವ ಪರಿಷ್ಕೃತ ಫಲಿತಾಂಶದಲ್ಲಿ  ಈ ವಿಷಯದಲ್ಲೂ 100ಕ್ಕೆ 100 ಅಂಕಗಳು ಬಂದಿವೆ. ಅನಘಾ, ಮೂಲತಃ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮೇಲಿನ ಕಡಗೋಡು ಗ್ರಾಮದವರು. ಶಿಕ್ಷಕ ದಂಪತಿಯಾದ ಶಿವಕುಮಾರ ಕೆ.ಎಂ. ಮತ್ತು ಮಂಗಳಾ ಬಿ. ಅವರ ಪುತ್ರಿ.

Theerthahalli's Anagha is on the list of first place winners in the state

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close