SUDDILIVE || SHIVAMOGGA
ಬ* ಮಕ್ಕಳು ಎಂದಿದ್ದೇಕೆ ತೀನಾಶ್ರೀ- Why did you say "children"? Teenashree
ಜೂ.1 ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿಎಂ ಮತ್ತು ಡಿಸಿಎಂ ಯಾವ ಮುಖ ಇಟ್ಕೊಂಡು ಬರುತ್ತಿದ್ದಾರೆ ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಸಿಎಂ ಮತ್ತು ಡಿಸಿಎಂ ಇದುವರೆಗೂ ಒಂದು ಸಭೆ ನಡೆಸಿಲ್ಲ. ಹಕ್ಕು ಪತ್ರ ನೀಡಲು ನ್ಯಾಯಾಲಯಕ್ಕೆ ಅಫಿಡೆವಿಟ್ ಹಾಕಿ ಸರ್ಕಾರ ನಿದ್ರೆಗೆ ಜಾರಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜೂ.1 ರಂದು ಶಿವಮೊಗ್ಗಕ್ಕೆ ಬರುವುದು ಯಾಕೆ? ಜೂ.1 ರ ಒಳಗೆ ಮಲೆನಾಡ ರೈತರ ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ಕಾರ್ಯಕ್ರಮವನ್ನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಶಿವಮೊಗ್ಗದ ಆಯನೂರು ರಸ್ತೆಯಲ್ಲಿರುವ ಕೆಲ ರಾಜಕೀಯ ವ್ಯಕ್ತಿಗಳ ಆಸ್ತಿಗಳನ್ನ ಉಳಿಸಲು ಸಿಎಂ ಸಿದ್ದರಾಮಯ್ಯ ಎರಡು ಎರಡು ಬಾರಿ ಅರಣ್ಯ ಸಭೆ ಮಾಡಿ ಡಿಲಿಮಿಟ್ಸ್ ಮಾಡಿದ್ದಾರೆ. ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಆದಾಗಿನಿಂದ ಒಂದು ಸಭೆನೂ ನಡೆಸಿಲ್ಲ. ಚುನಾವಣೆ ಪೂರ್ವದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದ ಸಿಎಂ ಡಿಸಿಎಂ ಈಗ ಯಾವ ಪುರುಷಾರ್ಥಕ್ಕೆ ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ಕೆಂಡಕಾರಿದರು.
ಅಣು ವಿದ್ಯುತ್ ಸ್ಥಾವರದ ಹೋರಾಟ ನಡೆದಿದ್ದಕ್ಕೆ, ಜಿಪಂ ನಲ್ಲಿ ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಅಣುಸ್ಥಾವರ ಬೇಡ ಹೈಕೋರ್ಟ್ ಪೀಠ ಬೇಕೆಂದು ಹೇಳುತ್ತಾರೆ. ಇದನ್ನೇ ಮಂತ್ರಿ ಮಂಡಲದಲ್ಲಿ ಯಾಕೆ ಬಿಲ್ ಪಾಸ್ ಮಾಡಿಸೊಲ್ಲ. ಕೇವಲ ಹೇಳಿಕೆಗೆ ಮಾತ್ರ ಸೀಮಿತಗೊಳಿಸುವುದೇಕೆ ಎಂದು ಪ್ರಶ್ನಿಸಿದರು.
ಅಣು ಸ್ಥಾವರದ ಹೋರಾಟ ನಡೆದಾಗ ಸಂಸದರು ಮತ್ತು ಶಾಸಕರು ಈ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಆದರೆ ಡಿಸಿ ಮಾಹಿತಿ ನೀಡಿರುವುದಾಗಿ ಹೇಳಿ ಇವರ ಬಾಯಿ ಮುಚ್ಚಿಸಿದ್ದಾರೆ. ಜಿಲ್ಲೆಯ ಆಗುಹೋಗುಗಳ ಬಗ್ಗೆ ವಿಪಕ್ಷ ಮತ್ತು ಆಡಳಿತ ಪಕ್ಷದವರಿಗೆ ಮಾಹಿತಿ ಇರಲ್ಲ ಎಂದರೆ ಹೇಗೆ ಎಂದು ಕಟುವಾಗಿ ಟೀಕಿಸಿದರು.
ಬ* ಮಕ್ಕಳು
ಸಿಎಂ ಮತ್ತು ಡಿಸಿಎಂ ಆಗಮನದ ವೇಳೆ ಕಾರ್ಯಕ್ರಮ ಬಹಿಷ್ಕಾರದ ಜೊತೆಗೆ ಪ್ರತಿಭಟನೆಗೆ ಇಳಿಯುತ್ತೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ತೀನಾಶ್ರೀ, ನಾನು ಪ್ರತಿಭಟನೆ ಎಂದ ಕ್ಷಣವೇ ಸಿಎಂ ಕಾರ್ಯಕ್ರಮಕ್ಕೆ ಎರಡು ದಿನ ಮೊದಲೇ ಪೋಲೀಸರನ್ನ ಮನೆಗೆ ಕಳುಹಿಸುತ್ತಾರೆ ಬ*ಮಕ್ಕಳು ನೆಮ್ಮದಿಯಾಗಿ ಇರಲು ಬಿಡಲ್ಲ. ಮೊದಲು ಗುಂಡೂರಾವ್ ಜೆ.ಹೆಚ್ ಪಟೇಲ್ ವರ ಅವಧಿಯಲ್ಲಿ ಕಾರ್ಯಕ್ರಮದ ವೇಳೆ ಪ್ರತಿಭಟಿಸುತ್ತಿದ್ದರೆ ಪ್ರತಿಭಟನೆ ಏಕೆ ಮಾಡುತ್ತೀರಿ ಬನ್ನಿ ಕುಳಿತು ಮಾತನಾಡೋಣ ಎಂಬ ಸೌಜನ್ಯವಿತ್ತು. ಈಗ ಆ ಸೌಜನ್ಯವಿಲ್ಲ. ಕಾರ್ಯಕ್ರಮಕ್ಕೆ ಬಹಿಷ್ಕಾರವಷ್ಟೆ ಎಂದರು.
Why did you say "children"? Teenashree

