SUDDILIVE || SHIVSMOGGA
ಮತ್ತೆ ಏರಿದ ಪೆಟ್ರೋಲ್ ಡಿಸೇಲ್ ದರ-Petrol and diesel prices hiked again
ಪೆಟ್ರೋಲ್, ಡಿಸೇಲ್ ದರ ಷೇರು ಸೂಚ್ಯಾಂಕದ ರೀತಿಯಲ್ಲಿ ಏರುತ್ತಿದೆ. ಕಳೆದ 8 ದಿನಗಳಲ್ಲಿ ತೈಲಬೆಲೆ ಮೂರು ಬಾರಿ ಏರಿಸಿರುವ ಕೇಂದ್ರ ಸರ್ಕಾರ ಸರಿಯಾಗಿ 5 ರೂ. ಹೆಚ್ಚಿಸಿದೆ.
ಮೇ.15 ರಂದು ತೈಲದರವನ್ನ 3.30 ರೂ.ಗೆ ಏರಿಸಲಾಗಿತ್ತು. ಮೇ.19 ರಂದು 94 ಪೈಸೆ ಏರಸಲಾಗಿತ್ತು. ಈಗ 8 ದಿನಗಳ ಅವಧಿಯಲ್ಲಿ ಪೆಟ್ರೋಲ್ ನ್ನ 90 ಪೈಸೆ ಏರಿಸಿದರೆ ಡಿಸೇಲ್ ದರವನ್ನ 94 ಪೈಸೆ ಏರಿಸಲಾಗಿದೆ.
ಶಿವಮೊಗ್ಗದಲ್ಲಿ ಸರ್ಕಾರಿ ಸ್ವಾಮ್ಯ ಭಾರತ್ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ 109.06 ರೂ. (ಹಿಂದಿನದರ 108.13) ಡಿಸೇಲ್ 97.12 ರೂ.(96.17) ಪ್ರೀಮಿಯಂ ಪೆಟ್ರೋಲ್ 118.50 ರೂ.ಗೆ(117.16) ಏರಿಸಲಾಗಿದೆ. ಹೆಚ್ ಪಿ ಪೆಟ್ರೋಲ್ ಬಂಕ್ ಗಳಲ್ಲಿ ಇಂದು ಪೆಟ್ರೋಲ್ ದರ 108.99 ರೂ.(108.06) ಆದರೆ ಡಿಸೇಲ್ 97.07 ರೂ.(95.12) ಪ್ರೀಮಿಯಂ ಪೆಟ್ರೋಲ್ 118.93 ರೂ.(117.99) ಟರ್ಬೋ ಡಿಸೇಲ್ 100.64 ರೂ.( 99.69) ದರ ಎರಿಕೆಯಾಗಿದೆ.
ಅದರಂತೆ ಗ್ಯಾಸ್ ದರವೂ ಸರಿಸುಮಾರು 3 ರೂ.ಗಳಷ್ಟು ಏರಿಕೆಯಾಗಿದೆ.
Petrol and diesel prices hiked again

