SUDDILIVE || SORABA
ಚಲಿಸುತ್ತಿದ್ದ ಬೈಕ್ ನಿಂದ ಬಿದ್ದು ಮಹಿಳೆ ಸಾವು-ಯಾಕೆ?Woman dies after falling from moving bike - why?
ಚಲಿಸುತ್ತಿದ್ದ ಬೈಕ್ ಪಲ್ಟಿಯಾಗಿ ಮಹಿಳೆಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ತಾಲೂಕಿನ ತಲ್ಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.
ಬೈಕ್ ಎಮ್ಮೆಗೆ ಡಿಕ್ಕಿ
ರತ್ನಮ್ಮ (62) ಮೃತ ದುರ್ದೈವಿ. ಮೇ 10ರ ಮಧ್ಯಾಹ್ನ ರತ್ನಮ್ಮ ಅವರು ತಂಗಿ ಗಂಡ ಸುರೇಶ್ ಎಂಬುವವರ ಬೈಕ್‌ನಲ್ಲಿ ಲಕ್ಕವಳ್ಳಿಯಿಂದ ಆನವಟ್ಟಿ ಮಾರ್ಗವಾಗಿ ಶಿಕಾರಿಪುರದ ದೇವಿಕೊಪ್ಪ ಗ್ರಾಮಕ್ಕೆ ಹೋಗುತ್ತಿದ್ದರು. ತಲ್ಲೂರು ಗ್ರಾಮದ ಶಾಲೆಯ ಬಳಿ ಬೈಕ್ ತೆರಳುತ್ತಿದ್ದ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ.
ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ಸಾವು
ಬೈಕಿನ ಹಿಂಬದಿಯಲ್ಲಿದ್ದ ರತ್ನಮ್ಮ ಅವರ ತಲೆಯ ಬಲಬದಿ ಮತ್ತು ಕಿವಿಯ ಹತ್ತಿರ ತೀವ್ರ ರಕ್ತಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ರತ್ನಮ್ಮ ಅವರನ್ನು ತಕ್ಷಣ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬೈಕ್ ಸವಾರ ಸುರೇಶ್ ಕೂಡ ಅಪಘಾತದಲ್ಲಿ ಗಾಯಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
