SUDDILIVE || THIRTHAHALLI
ಬೈಕ್ ನಲ್ಲಿ ಸಾಗುವಾಗ ಅಡಿಕೆ ಮರ ಬಿದ್ದು ಕಾರ್ಮಿಕ ಸಾವು- Worker dies after areca nut tree falls on him while riding bike
ತೀರ್ಥಹಳ್ಳಿಯ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ – ಬಾಳಗಾರು ಸಂಪರ್ಕದ ರಸ್ತೆಯ ಮಾರ್ಗದಲ್ಲಿ ಬೈಕ್ ನಲ್ಲಿ ಹೋಗುವಾಗ ಕಾರ್ಮಿಕ ಮಾಯಕಣ್ಣನ್ ಅವರ (61) ತಲೆಯ ಮೇಲೆ ಅಡಿಕೆ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.
ಪಟ್ಟಣದ ಗಾಂಧಿನಗರ ಕೆರೆಯ ಸಮೀಪದ ಮನೆಯನ್ನು ಹೊಂದಿರುವ ಕಲ್ಲು ಕಾರ್ಮಿಕ ಕಲ್ಲತ್ತಿ ಸಮೀಪದ ಮನೆಯೊಂದಕ್ಕೆ ಹಾಕಿರುವ ಕಲ್ಲಿನ ಹಣ ಪಡೆದು ವಾಪಾಸ್ಸಾಗುತ್ತಿದ್ದರು. ಅಬ್ಬಿಗದ್ದೆಯ ತೋಟದಲ್ಲಿ ಹಳೆಯ ಅಡಿಕೆ ಮರಗಳನ್ನು ತೆರವು ಮಾಡುವ ಸಂಬಂಧ ಮರಗಳನ್ನು ಕಡಿಯುತ್ತಿದ್ದರು.
ಈ ವೇಳೆ ಆಕಸ್ಮಿಕವಾಗಿ ಅಡಿಕೆ ಮರವೊಂದು ರಸ್ತೆಗೆ ವಾಲಿದೆ. ಸ್ಥಳದಲ್ಲಿಯೇ ಸಂಚರಿಸುತ್ತಿದ್ದ ಮಾಯಕಣ್ಣನ್ ತಲೆಯ ಮೇಲೆ ಬಿದ್ದಿದೆ. ಅಡಿಕೆ ಮರಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಮಾಯಕಣ್ಣನ್ ಅಸುನೀಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Worker dies after areca nut tree falls on him while riding bike


