SUDDILIVE || SAGARA
ಅಪಘಾತದಲ್ಲಿ ಯುವಕ ಸಾವು, ಬೈಕ್ ಗೆ ಬೆಂಕಿ ತಗುಲಿ ಸುಟ್ಟುಕರಲು-Youth dies in accident, bike catches fire, burns to death
ಅಕ್ಕಿ ತುಂಬಿದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ರಸ್ತೆಯ ಕಾಗೇಹಳ್ಳ ಗ್ರಾಮದ ಬಳಿ ಸಂಭವಿಸಿದೆ.
ಚಿಕ್ ಮತ್ತೂರು ಗ್ರಾಮದ ಕುಂಬಾರಗೊಳ್ಳಿಯ 25 ವರ್ಷ ವಯಸ್ಸಿನ ಪ್ರೇಮ್ ಎಂಬ ಯುವಕ ಸ್ಥಳದಲ್ಲೇ ಸಾವು ಕಂಡಿರುವುದಾಗಿ ತಿಳಿದು ಬಂದಿದೆ.
ಅಪಘಾತದಲ್ಲಿ ಬೈಕ್ ಲಾರಿಯ ಕೆಳಗಡೆ ಬಿದ್ದಿದ್ದು ಬೈಕ್ ಹಿಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕಿನಲ್ಲಿದ್ದ ಪೆಟ್ರೋಲ್ ಸೋರಿಕೆಯಿಂದಾಗಿ ಬೆಂಕಿ ತಗುಲಿರಬಹುದು ಎಂದು ಊಹಿಸಲಾಗಿದೆ.
ಸಾಗರ್ ಹೆಲ್ಪ್ ಲೈನ್ ತಂಡದ ಸಹಾಯದಿಂದ ಆಂಬುಲೆನ್ಸ್ ಮೂಲಕ ಮೃತ ದೇಹವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಶವಾಗರಕ್ಕೆ ರವಾನಿಸಲಾಗಿದೆ. ಪ್ರಕರಣ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Youth dies in accident, bike catches fire, burns to death
