SUDDILIVE || AGUMBE
ಆಗುಂಬೆ-ಸುಲಿಗೆ ಪ್ರಕರಣದಲ್ಲಿ ನಾಲ್ವರ ಬಂಧನ- Four arrested in Agumbe extortion case
ಒಂಟಿ ಮನೆಯಲ್ಲಿದ್ದ ಮಹಿಳೆಯನ್ನ ಸುಲಿಗೆ ಮಾಡಿದ ಪ್ರಕರಣವನ್ನ ಆಗುಂಬೆ ಪೊಲೀಸರು ಬೇಧಿಸಿದ್ದು ನಾಲ್ವರು ಆರೋಪಿತರನ್ನ ಬಂಧಿಸಿದ್ದಾರೆ. 11 ಲಕ್ಷ 96700/- ರೂ. ಮೌಲ್ಯದ ಚಿನ್ನಾಭತಣ, ಬೆಳ್ಳಿ ನಗದನ್ನ ಆರೋಪಿತರಿಂದ ವಶಕ್ಕೆ ಪಡೆಯಲಾಗಿದೆ.
ದಿನಾಂಕ:21/04/2026 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದಲ್ಲಿ ಒಂಟಿ ಮಹಿಳೆ ವಾಸವಿದ್ದ ಮನೆಯಲ್ಲಿ, ಸುಲಿಗೆ ಪ್ರಕರಣ ನಡೆದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ಹಾಗೂ ಮಾಲು ಪತ್ತೆಗಾಗಿ ನಿಖಿಲ್.ಬಿ ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಕಾರಿಯಪ್ಪ. ಎ.ಜಿ. ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ರವರ ಮೂಮದಾಳತ್ವದಲ್ಲಿ, ರಾಜಶೇಖರ್.ಎಲ್ ಸಿಪಿಐ ಮಾಳೂರು ವೃತ್ತ, ಹಾಗೂ ಇಮ್ರಾನ್ ಬೇಗ್, ಪಿಐ ತೀರ್ಥಹಳ್ಳಿ ಪೊಲೀಸ್ ಠಾಣೆ ರವರನೇತೃತ್ವದಲ್ಲಿ, ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವನಗೌಡ ಮಾಳೂರು ಪಿ.ಎಸ್ಐ ಸುನಿಲ್, ಸಿಬ್ಬಂದಿಯವರಾದ ಲಿಂಗೇಗೌಡ, ಸುರಕ್ಷೀತ್, ಕಿರಣ್ ಕುಮಾರ, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ.ಹೆಚ್.ಸಿ, ಅರವಿಂದ, ಚಾಲಕರಾದ ಅವಿನಾಶ, ತಾಂತ್ರೀಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನುರಚಿಸಲಾಗಿರುತ್ತದೆ.
ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಭರತ್.ವೈ @ ಭಟ್ಟ, 25 ವರ್ಷ, ವಾಸ ಜೇಡಿಕಟ್ಟೆ, ಹೊಸೂರು, ತವಲಗುಂದಿ ಪೋಸ್ಟ್, ಭದ್ರಾವತಿ (ತಾ), 2) ಅಶೋಕ, 28 ವರ್ಷ, ಜಾವಳ್ಳಿ ಗ್ರಾಮ, ಶಿವಮೊಗ್ಗ, 3) ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು 4) ಪಾರ್ತಿಪ್, 25 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ (ತಾ) ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1) 70 ಗ್ರಾಂ ಬಂಗಾರದ ಆಭರಣಗಳು , ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು, 2) 56 ಗ್ರಾಂ ಬೆಳ್ಳಿ ವಸ್ತುಗಳ, ಅಂದಾಜು ಮೌಲ್ಯ 16,700/-ರೂಗಳು, 3) ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 50,000/- ರೂಗಳು, 4) ಕೃತ್ಯಕ್ಕೆ ಬಳಸಿದ ಇನ್ನೊಂದು ಸ್ಕೂಟಿ, ಅಂದಾಜು ಮೌಲ್ಯ 50,000/- ರೂಗಳು ಸೇರಿ ಒಟ್ಟು 11 ಲಕ್ಷ 96700/- ರೂಗಳ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿ ಮತ್ತು ಮಾಲು ಪತ್ತೆ ಮಾಡಿದ ತನಿಖಾ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ.
Four arrested in Agumbe extortion case
