SUDDILIVE || SHIVAMOGGA
ತಂದೆ ಬುದ್ದಿ ಹೇಳಿದ್ದಕ್ಕೆ 19 ರ ಯುವಕ ಶವವಾಗಿ ಪತ್ತೆ-19-year-old youth found dead after father's advice
ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಯುವಕನೊಬ್ಬ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಸಕಲೇಶ್ಪುರದ ಸಂಕೇತ್ (19) ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ, ಮೃತ ಸಂಕೇತ್ ಇತ್ತೀಚೆಗಷ್ಟೇ ತನ್ನ ಐಟಿಐ (ITI) ವ್ಯಾಸಂಗವನ್ನು ಮುಗಿಸಿದ್ದನು. ಆದರೆ ಮುಂದೆ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಖಾಲಿ ಉಳಿದಿದ್ದನು. ಈ ಕಾರಣದಿಂದಾಗಿ ಆತನ ತಂದೆಯು ಕೆಲಸಕ್ಕೆ ಹೋಗುವಂತೆ ಮಗನಿಗೆ ತಿಳಿಹೇಳಿ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮೂರು ದಿನಗಳ ಹಿಂದೆಯೇ ಸಂಭವಿಸಿದೆ ಎನ್ನಲಾಗಿದ್ದು, ಇಂದು ಪುರಲೆ ಕೆರೆಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ನೀರಿನ ಮೇಲ್ಭಾಗಕ್ಕೆ ಬಂದಿದ್ದ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನ ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.
19-year-old youth found dead after father's advice


