5 ದಿನಗಳ 'ಕಾಯಕ ಸೇತು' ಉದ್ಯೋಗ ಸಂದರ್ಶನಕ್ಕೆ ಚಾಲನೆ : 2,000ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ-5-day 'Kayaka Setu' job interviews launched: Job opportunities for over 2,000 women

SUDDILIVE || SHIVAMOGGA


5 ದಿನಗಳ  'ಕಾಯಕ ಸೇತು' ಉದ್ಯೋಗ ಸಂದರ್ಶನಕ್ಕೆ  ಚಾಲನೆ : 2,000ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ-5-day 'Kayaka Setu' job interviews launched: Job opportunities for over 2,000 women     

Kayaka, setu


ಶಿವಮೊಗ್ಗ: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ಉಚಿತ ಜಾಬ್ ಪೋರ್ಟಲ್ 'ಕಾಯಕ ಸೇತು' ಮೂಲಕ ಇದೀಗ  ನೇಮಕಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 5 ದಿನಗಳ ಈ ಬೃಹತ್ ಉದ್ಯೋಗ ಸಂದರ್ಶನಕ್ಕೆ ಇಂದು ಡಾ. ಧನಂಜಯ ಸರ್ಜಿ ಅವರ ವಿಧಾನ ಪರಿಷತ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಯಕಸೇತು ಉದ್ಯೋಗ ಸಂದರ್ಶನಕ್ಕೆ ಚಾಲನೆ ನೀಡಲಾಯಿತು.   

ಕಾಯಕ ಸೇತು ಮತ್ತು ಸರ್ಜಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉದ್ಯೋಗ ಸಂದರ್ಶನವನ್ನು  ಆಯೋಜಿಸಲಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಫೋನ್ ಮ್ಯಾನುಫ್ಯಾಕ್ಚರಿಂಗ್ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಪ್ರಸ್ತುತ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳಿಗೆ ಕೇವಲ ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಬೇಕು, ಅವರಿಗೆ ಭದ್ರತೆ ಮತ್ತು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ಸಿಗಬೇಕು ಎಂಬ ಕಳಕಳಿಯಿಂದ ಈ ವಿಶೇಷ ಸಂದರ್ಶನವನ್ನು ಶಿವಮೊಗ್ಗದಲ್ಲೇ ಆಯೋಜಿಸಲಾಗಿದೆ. 

 ಜಿಲ್ಲೆಯ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಡಾ. ಧನಂಜಯ ಸರ್ಜಿ ಅವರು ಶಿವಮೊಗ್ಗದ ತಮ್ಮ ಶಾಸಕರ ಕಚೇರಿಯಲ್ಲಿ ಕೇವಲ 7 ತಿಂಗಳ ಹಿಂದೆ 'ಕಾಯಕ ಸೇತು' ಜಾಬ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದ್ದರು.  ಈ ಅಲ್ಪಾವಧಿಯಲ್ಲೇ ಈ ಪೋರ್ಟಲ್ ಮೂಲಕ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ನೂರಾರು ಯುವಕ-ಯುವತಿಯರು ಯಶಸ್ವಿಯಾಗಿ ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇದೀಗ ಯುವತಿಯರಿಗೆ ಸುರಕ್ಷಿತ ಹಾಗೂ ಭವ್ಯ ಭವಿಷ್ಯ ರೂಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.  ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. 

ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ವತಿಯಿಂದಲೇ ಉಚಿತ ವಸತಿ ವ್ಯವಸ್ಥೆ, ಉಚಿತ ಊಟ , ಉಚಿತ ಕ್ಯಾಬ್ , ಪಿಎಫ್  ಮತ್ತು ಇಎಸ್ಐ, 24x7 ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. 10ನೇ ತರಗತಿ, ಪಿಯುಸಿ (PUC), ಡಿಪ್ಲೊಮಾ, ಐಟಿಐ (ITI) ಅಥವಾ ಯಾವುದೇ ಪದವಿ ಓದಿದ18 ರಿಂದ 34 ವರ್ಷದೊಳಗಿನ ಯುವತಿಯರು /ಮಹಿಳೆಯರು ಈ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.  

ಉದ್ಯೋಗ ಸಂದರ್ಶನವು ಇಂದಿನಿಂದ (ಜೂನ್ 8) ಪ್ರಾರಂಭವಾಗಿ, ಜೂನ್ 09, 10, 11, ಮತ್ತು 12 ರವರೆಗೆ ಒಟ್ಟು 5 ದಿನಗಳ ಕಾಲ  ಡಾ.ಧನಂಜಯ ಸರ್ಜಿ ಅವರ 'ಜನಪರ ಜೀವಪರ ಕಾರ್ಯಾಲಯ', 2ನೇ ಮಹಡಿ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ (ವಲಯ-01), ಪೊಲೀಸ್ ಚೌಕಿ ಸಮೀಪ, ವಿನೋಬನಗರ, ಶಿವಮೊಗ್ಗ. ಇಲ್ಲಿ ನಡೆಯಲಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಸಂದರ್ಶನಕ್ಕೆ ನೇರವಾಗಿ ಹಾಜರಾಗುಬಹುದು.  

ಕಾರ್ಯಕ್ರಮದಲ್ಲಿ ಶಿವಮೊಗ್ಗ  ನಗರ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್ ಅವರು, ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಅವರು, ಮಾಜಿ ಸುಡಾ ಅಧ್ಯಕ್ಷರಾದ ನಾಗರಾಜ್, ಜ್ಞಾನೇಶ್ವರ್ ಅವರು ಇನ್ನೋವ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ದಯಾನಂದ್ ಅವರಿಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

5-day 'Kayaka Setu' job interviews launched: Job opportunities for over 2,000 women

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close