SUDDILIVE || BHADRAVATHI
ಬೇಕರಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ವಿಶ್ವ ಯಾನೆ ಮುದ್ದೆ ಮೇಲೆ ಮಾರಣಾಂತಿಕ ಹಲ್ಲೆ- Vishwa alias Mudde was fatally attacked while drinking tea at a bakery.
ನಗರದ ಅನ್ವರ್ ಕಾಲೋನಿಯಲ್ಲಿರುವ ಬೇಕರಿಯೊಂದರಲ್ಲಿ ಟೀ ಕುಡಿಯಲು ಬಂದಿದ್ದ ವಿಶ್ವ ಯಾನೆ ಮುದ್ದೆ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ವಿಶ್ವ ಯಾನೆ ಮುದ್ದೆ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದರೂ, ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಂದರೆ 2024 ರಲ್ಲಿ ವಿಶ್ವ ಮತ್ತು ಯುವಕನೋರ್ವನ ನಡುವೆ ಇಸ್ಪೀಟ್ ಆಟದ ವಿಚಾರವಾಗಿ ಗಲಾಟೆ ನಡೆದಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ವಿಚಾರವೇ ಈ ವೈಮನಸ್ಸಿಗೆ ಕಾರಣವಾಗಿತ್ತು ಎನ್ನಲಾಗಿದೆ.
ಇದೇ ವೇಳೆ, 2025ರಲ್ಲಿ ಭರತ್ ಯಾನೆ ಕೊಳಕ ಭರತ್ ಮೇಲಿನ ಹಲ್ಲೆ ಪ್ರಕರಣದಲ್ಲೂ ವಿಶ್ವ ಯಾನೆ ಮುದ್ದೆಯ ಹೆಸರು ಕೇಳಿಬಂದಿತ್ತು. ಅಲ್ಲದೆ ವಿಶ್ವ ಮತ್ತು ಸಂದೀಪ್ ನಡುವೆ ನಡೆದಿದ್ದ ಹೊಡೆದಾಟದ ಸಂಬಂಧವೂ ಪ್ರಕರಣ ದಾಖಲಾಗಿತ್ತು. ಅದರಂತೆ ಈ ಹಿಂದೆ ಹಳದಮ್ಮ ದೇವಸ್ಥಾನದಲ್ಲಿ ಅರ್ಚಕರಿಂದ ಪೂಜಿಸಲ್ಪಟ್ಟ ಆಯುಧವನ್ನ ವಿಶ್ವ ಸ್ವೀಕರಿಸುತ್ತಿದ್ದ ವಿಡಿಯೋಗೆ ಸಲಗ ಸಿನಿಮಾದ ಡೈಲಾಗ್ ಹಾಕಲಾಗಿತ್ತು ಶೋಕಿಗೆ ತಿರುಪೋಕಿಗೆ ಫೀಲ್ಡ್ ಗೆ ಇಳಿದವನಲ್ಲ, ಗತ್ತಿಗೆ ಗಾಂಭೀರ್ಯಕ್ಕೆ ಗಜಗಾಂಭೀರ್ಯಕ್ಕೆ ಫೀಲ್ಡ್ ಮಾಡಿದವನು ಸಲಗ... ಎಂದು 15 ಸೆಕೆಂಡ್ ವಿಡಿಯೋ ಮಾಡಿರುವುದನ್ನ ವೈರಲ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅನ್ವರ್ ಕಾಲೋನಿಯ ಬೇಕರಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ವಿಶ್ವ ಮೇಲೆ ಏಕಾಏಕಿ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಆತನ ಹಳೆಯ ವೈಷಮ್ಯ ಹೊಂದಿದ್ದವರೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಹಲ್ಲೆಯ ತೀವ್ರತೆಗೆ ವಿಶ್ವನನ್ನು ಬೇಕರಿಯ ಫ್ರಿಡ್ಜ್ ಅಡಿ ಬೀಳುವಂತೆ ಹೊಡೆದಿದ್ದು, ಆತ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಸಿಬ್ಬಂದಿ ಗಾಯಾಳುವನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಹಲ್ಲೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಸ್ಥಳೀಯ ಮಾಹಿತಿ ಪ್ರಕಾರ 6-7 ಜನರ ಗುಂಪು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಎನ್ನಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭದ್ರಾವತಿ ಶಾಸಕ ಎಂ ಎಲ್ ಎ ಬಸವೇಶ್ವರ್, ಈ ಹಲ್ಲೆಯನ್ನ ಜೆಡಿಎಸ್ ಕಾರ್ಯಕರ್ತರು ನಡೆಸಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
Vishwa alias Mudde was fatally attacked while drinking tea at a bakery.


ಎಂ.ಎಲ್.ಎ ಬಸವೇಶ್ವರ್ ಅಲ್ಲ ಸಂಗಮೇಶ್ವರ
ಪ್ರತ್ಯುತ್ತರಅಳಿಸಿ