SUDDILIVE || SHIVAMOGGA
ಸರ್ಕಾರದ ಆದೇಶದಂತೆ ಶಿವಮೊಗ್ಗಕ್ಕೆ ವರ್ಗ-ಸಿಎಸ್ ಷಡಾಕ್ಷರಿ- As per the government order, I came to shivamogga-CS Shadakshari
ಶಿವಮೊಗ್ಗದ ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಉಪನಿರ್ದೇಶಕರಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿಎಸ್ ಷಡಾಕ್ಷರಿ ಉಪನಿರ್ದೇಶಕರಾಗಿ ವರ್ಗಗೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಶಿವಮೊಗ್ಗಕ್ಕೆ ವರ್ಗ ಮಾಡಿದೆ ಈ ಹಿಂದೆ ಬೆಂಗಳೂರಿಗೆ ವರ್ಗ ಮಾಡಲಾಗಿತ್ತು. ಕೆಲಸ ಮಾಡಿದ್ವಿ. ಈಗ ಸರ್ಕಾರ ಶಿವಮೊಗ್ಗಕ್ಕೆ ಮಾಡಿದೆ ಸರ್ಕಾರ ಆದೇಶದಂತೆ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಜು.11ರಂದು ಒಪಿಎಸ್ ಗೆ ಹಕ್ಕೊತ್ತಾಯ.
ರಾಜ್ಯ ಸಂಘದ ಚುನಾವಣೆ ಸಂದರ್ಭದಲ್ಲಿ ನೌಕರರ ಸಂಘದ ಸದಸ್ಯರ ಮಕ್ಕಳಿಗೆ ಎಷ್ಟೇ ಖರ್ಚಾದರೂ ಪ್ರತಿಭಾ ಪುರಸ್ಕಾರ ಮಾಡೇ ತೀರುತ್ತೇನೆ ಎಂದಿದ್ದೆ. ಅದೇ ರೀತಿ ನೌಕರರಿಗೆ ಹಳೆ ಪಿಂಚಣಿ (ಒಪಿಎಸ್) ವ್ಯವಸ್ಥೆ ಜಾರಿ ಮಾಡಿಸಿಯೇ ಸಿದ್ಧ ಎಂದು ಘೋಷಣೆ ಮಾಡಿದ್ದೆ. ಅದಕ್ಕಾಗಿ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನ ನಡಯುತ್ತಿದೆ.
ಮುಖ್ಯ ಮಂತ್ರಿಗಳೂ ಬದಲಾಗಿದ್ದಾರೆ. ಜುಲೈ 11ರಂದು ಬೆಂಗಳೂರಿನಲ್ಲಿ ಸಂಘದ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ಅಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿ ಒಪಿಎಸ್ ಗೆ ಹಕ್ಕೊತ್ತಾಯ ಮಾಡಲಿದ್ದೇವೆ. ಸಿಎಂ ಸ್ಪಂದಿಸುವರೆಂಬ ಆಶಾಭಾವನೆ ಇದೆ. ಗುರಿಮುಟ್ಟುವ ಅಚಲ ವಿಶ್ವಾಸವಿದೆ ಎಂದರು.
As per the government order, I came to shivamogga-CS Shadakshari
