ಜೂನ್ 7 ಮತ್ತು 8 ರಂದು ಶಿವಮೊಗ್ಗದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ-Disruption in Drinking Water Supply in Shivamogga on June 7 and 8

 SUDDILIVE || SHIVAMOGGA

ಜೂನ್ 7 ಮತ್ತು 8 ರಂದು ಶಿವಮೊಗ್ಗದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ-Disruption in Drinking Water Supply in Shivamogga on June 7 and 8    

Drinking, water

ಶಿವಮೊಗ್ಗ, ಜೂನ್ 6: ಮೆಸ್ಕಾಂ ಇಲಾಖೆಯ ನಗರ ಉಪ-ವಿಭಾಗ–2ರ ವ್ಯಾಪ್ತಿಯ ಮಂಡ್ಲಿ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಜೂನ್ 7ರಂದು ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಈ ಕಾರಣದಿಂದಾಗಿ ಜೂನ್ 7 ಹಾಗೂ 8ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಅಲ್ಲದೆ, ಈ ಅವಧಿಯಲ್ಲಿ ಉಂಟಾಗುವ ತಾತ್ಕಾಲಿಕ ತೊಂದರೆಗಳನ್ನು ಮನಗಂಡು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸುವಂತೆ ಶಿವಮೊಗ್ಗದ ನಿರ್ವಹಣೆ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Disruption in Drinking Water Supply in Shivamogga on June 7 and 8

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close