ಶಿವಮೊಗ್ಗದಲ್ಲಿ ಗೋವಿಂದ ಅಂಡ್ ಗೋವಿಂದ ಕಂಪನಿ ಯಾವ ಇಲಾಖೆ?ಮಾಜಿ ಶಾಸಕರ ಗಂಭೀರ ಆರೋಪವೇನು?Which department in Shivamogga is being called the “Govinda & Govinda Company”? What are the serious allegations made by the former MLA?

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಗೋವಿಂದ ಅಂಡ್ ಗೋವಿಂದ ಕಂಪನಿ ಯಾವ ಇಲಾಖೆ?ಮಾಜಿ ಶಾಸಕರ ಗಂಭೀರ ಆರೋಪವೇನು?Which department in Shivamogga is being called the “Govinda & Govinda Company”? What are the serious allegations made by the former MLA?       

Deparment, govinda


ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಬೇಲೇಕೆರೆ ಬಂದರಿನಲ್ಲಿ ನಡೆದಿದ್ದ ಬಹುಕೋಟಿ ಮರಳು ಹಗರಣದ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲೆಯಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 22 ಮರಳು ಕ್ವಾರಿಗಳು ಕಾರ್ಯನಿರ್ವಹಿಸದೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದು, ಇದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ಆದಾಯ ನಷ್ಟವಾಗುತ್ತಿದೆ ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಕ್ರಮ ಮರಳು ಸಾಗಾಟದ ಕುರಿತು ದಾಳಿ ನಡೆಸಲು ಹೋದಾಗ ಅಧಿಕಾರಿಗಳಿಗೆ ವಾಹನ ಸೌಲಭ್ಯವೇ ನೀಡಲಾಗುವುದಿಲ್ಲ. ಕೆಲವೊಮ್ಮೆ ಚಾಲಕರನ್ನೇ ಮನೆಗೆ ಕಳುಹಿಸುವ ಮೂಲಕ ಕಾರ್ಯಾಚರಣೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಯಾರಿಗೂ ಕಾನೂನುಬದ್ಧವಾಗಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಪರಿಣಾಮವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಮರಳು ದೊರೆಯದೆ, ಅಕ್ರಮ ಮರಳು ದಂಧೆ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿ ಕ್ವಾರಿಯಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ, ಅದರ ಲೆಕ್ಕ ಸರ್ಕಾರದ ಖಜಾನೆಗೆ ಸೇರುತ್ತಿಲ್ಲ. ಅಕ್ರಮ ಮರಳು ಸಾಗಾಟ ನಡೆಸುವವರೊಂದಿಗೆ ಕೆಲ ಅಧಿಕಾರಿಗಳು ಆತ್ಮೀಯ ಸಂಬಂಧ ಹೊಂದಿರುವ ಅನುಮಾನವಿದೆ ಎಂದು ಪ್ರಸನ್ನಕುಮಾರ್ ಆರೋಪಿಸಿದರು.

ಇತ್ತೀಚೆಗೆ ಲೋಕಾಯುಕ್ತ ದಾಳಿಯಲ್ಲಿ ಸುಮಾರು 37 ಸಾವಿರ ಮೆಟ್ರಿಕ್ ಟನ್ ಮರಳು ಸಂಗ್ರಹವಾಗಿರುವುದು ಪತ್ತೆಯಾಗಿದ್ದು, ಇದು ಸುಮಾರು 4 ಸಾವಿರ ಲೋಡ್‌ಗಳಿಗೆ ಸಮಾನವಾಗಿದೆ. ಇದರ ಮೌಲ್ಯ 8 ಕೋಟಿ ರೂಪಾಯಿಯಿಂದ 12 ಕೋಟಿ ರೂಪಾಯಿವರೆಗೆ ಇರಬಹುದು ಎಂದು ಅವರು ಅಂದಾಜಿಸಿದರು.

"ಈ ರೀತಿ ಮುಂದುವರಿದರೆ ಶಿವಮೊಗ್ಗದಲ್ಲೂ ಬೇಲೇಕೆರೆ ಹಗರಣದಂತಹ ದೊಡ್ಡ ಮಟ್ಟದ ಅಕ್ರಮ ಬಹಿರಂಗವಾಗುವ ಸಾಧ್ಯತೆ ಇದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳಿದ್ದರೂ ಇದುವರೆಗೆ ಅಮಾನತು ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ" ಎಂದು ಹೇಳಿದರು.

ಜಿಲ್ಲೆಗೆ ಪ್ರಭಾವಿ ಸಚಿವ ಸ್ಥಾನ ಸಿಗದಿರುವುದರಿಂದ ಆಡಳಿತಾತ್ಮಕ ಮೇಲ್ವಿಚಾರಣೆ ಕೊರತೆಯಾಗಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ಅಕ್ರಮ ಮರಳು ದಂಧೆ ಹಾಗೂ ಇಲಾಖೆಯ ಕಾರ್ಯವೈಖರಿಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

Which department in Shivamogga is being called the “Govinda & Govinda Company”? What are the serious allegations made by the former MLA?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close