ಎಸ್‌.ಐ.ಆರ್‌ ಬಗ್ಗೆ ಕಾಂಗ್ರೆಸ್ ಕಳವಳ ಅರ್ಥವಾಗುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ-Don't understand Congress' concern about SIR: Eshwarappa lashes out

SUDDILIVE || SHIVAMOGGA

ಎಸ್‌.ಐ.ಆರ್‌ ಬಗ್ಗೆ ಕಾಂಗ್ರೆಸ್ ಕಳವಳ ಅರ್ಥವಾಗುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ-Don't understand Congress' concern about SIR: Eshwarappa lashes out    

Lashes, out

ದೇಶದಲ್ಲಿ ನಡೆಯುತ್ತಿರುವ ಎಸ್‌.ಐ.ಆರ್‌. (Special Intensive Revision) ಬಗ್ಗೆ ಕಾಂಗ್ರೆಸ್‌ ನಾಯಕರು ಏಕೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ರಾಷ್ಟ್ರಭಕ್ತರ ಬಳಗದ ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಪಶ್ಚಿಮ ಬಂಗಾಳದಲ್ಲಿ 9 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಯರನ್ನು ಗುರುತಿಸಿ ಹೊರಹಾಕಿದ ಕ್ರಮವನ್ನು ಇಡೀ ದೇಶ ಮೆಚ್ಚಿದೆ. ದೇಶದ ಅನೇಕ ಭಾಗಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದನ್ನು ಗಮನಿಸಿದ್ದೇವೆ. ಒಬ್ಬ ವ್ಯಕ್ತಿಯ ಹೆಸರು ಮೂರು ಮೂರು ಕಡೆ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಉದಾಹರಣೆಗಳೂ ಕಂಡುಬಂದಿವೆ. ದೇಶದ ವಿವಿಧ ಭಾಗಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಯಾರಿಗೂ ಗೊತ್ತಾಗದಂತೆ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದವರು ಕೂಡ ಸಿಕ್ಕಿಬಿದ್ದಿದ್ದು, ಅವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಇದ್ದದ್ದನ್ನು ನೋಡಿದ್ದೇವೆ ಎಂದು ಆರೋಪಿಸಲಾಯಿತು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುವ ಪ್ರಕರಣಗಳೂ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ನೈಜ ಮತದಾರರ ಪಟ್ಟಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಸಿದ್ಧಪಡಿಸಲಾಗುತ್ತಿರುವುದು ಸಂತೋಷದ ವಿಚಾರ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವನ್ನು ರಾಜ್ಯ ಸರ್ಕಾರದ ಸಿಬ್ಬಂದಿಯೇ ನಡೆಸುತ್ತಿದ್ದಾರೆ ಎಂದು ತಿಳಿಸಲಾಯಿತು.

ಇಷ್ಟೆಲ್ಲಾ ಆದರೂ ಕಾಂಗ್ರೆಸ್‌ ನಾಯಕರು ಬಳಸುತ್ತಿರುವ ಪದಗಳು ಆಶ್ಚರ್ಯ ಮೂಡಿಸುತ್ತವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಎಸ್‌.ಐ.ಆರ್‌ನಿಂದ ಪ್ರಜಾಪ್ರಭುತ್ವದ ಮಾರಣಹೋಮ" ಎಂದು ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದವರು ಮತ ಚಲಾಯಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಣಹೋಮವೇ? ಪಾಕಿಸ್ತಾನದವರು ಬಂದು ಮತ ಹಾಕಿದರೆ ಅದು ಮಾರಣಹೋಮವೇ? ಒಬ್ಬ ವ್ಯಕ್ತಿ ಮೂರು ಮೂರು ಕಡೆ ಮತ ಹಾಕಿದರೆ ಅದು ಮಾರಣಹೋಮವೇ? ಎಂದು ಪ್ರಶ್ನಿಸಲಾಯಿತು.

ಭಯೋತ್ಪಾದಕರು, ನಕಲಿ ಮತದಾರರ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಅವರ ಅನುಭವ ಏನೋ ಅವರಿಗೆ ಗೊತ್ತು. ರಾಜ್ಯದಾದ್ಯಂತ ಬಿ.ಎಲ್.ಓ.ಗಳು ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ರಾಷ್ಟ್ರಭಕ್ತ ಬಳಗದ ವತಿಯಿಂದಲೂ ಪ್ರತಿ ಬೂತ್‌ಗೆ ಬಿ.ಎಲ್.ಓ.ಗಳ ಜೊತೆಗೆ ಕಾರ್ಯಕರ್ತರನ್ನು ಕಳುಹಿಸಲಾಗುತ್ತಿದೆ. ಕಾಂಗ್ರೆಸ್‌ ಕೂಡ ತಮ್ಮ ಕಾರ್ಯಕರ್ತರನ್ನು ಕಳುಹಿಸಲಿ. ನಿಮ್ಮ ಕಾರ್ಯಕರ್ತರನ್ನು ಕಳುಹಿಸಬೇಡಿ ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿ ನಡೆಸಿ "ಪ್ರಜಾಪ್ರಭುತ್ವ ಅಪಾಯದಲ್ಲಿದೆ" ಎಂದು ಹೇಳುತ್ತಿರುವ ಕಾಂಗ್ರೆಸ್‌ ನಾಯಕರ ಹೇಳಿಕೆಗಳ ಬಗ್ಗೆ ಕೂಡ ಟೀಕಿಸಲಾಯಿತು. ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, "ಮತದಾರರ ಹಕ್ಕನ್ನು ಕಸಿಯಲು ಹೊರಟಿದ್ದಾರೆ. ಎಸ್‌.ಐ.ಆರ್‌. ಪ್ರಕ್ರಿಯೆಯನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಭಾವಿಸಿ ಮತದಾರರ ಹೆಸರು ಕೈಬಿಡದಂತೆ ನೋಡಿಕೊಳ್ಳಬೇಕು. ಮತದಾರರ ಹಕ್ಕೇ ನಮಗೆ ಎಕೆ-47. ಈ ಅಸ್ತ್ರವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು. ಇಲ್ಲವಾದರೆ ದೇಶ ಮತ್ತೆ ಗುಲಾಮಗಿರಿಗೆ ತಲುಪುವುದರಲ್ಲಿ ಸಂದೇಹವಿಲ್ಲ" ಎಂದು ಹೇಳಿದ್ದಾರೆ. ನಿಮ್ಮ ಕಾರ್ಯಕರ್ತರನ್ನು ಬಿ.ಎಲ್.ಓ.ಗಳ ಜೊತೆ ಕಳುಹಿಸಬೇಡಿ ಎಂದು ಯಾರು ಹೇಳಿದ್ದಾರೆ ಎಂದು ಮತ್ತೆ ಪ್ರಶ್ನಿಸಿದರು.

ಎಸ್‌.ಐ.ಆರ್‌. ಪ್ರಕ್ರಿಯೆ ಸಂಪೂರ್ಣವಾಗಿ ಸಂವಿಧಾನಬದ್ಧ ಹಾಗೂ ಕಾನೂನುಬದ್ಧವಾಗಿದೆ. ಚುನಾವಣಾ ಆಯೋಗಕ್ಕೆ ಸಂವಿಧಾನದ ಅನುಚ್ಛೇದ 324ರ ಪ್ರಕಾರ ಎಸ್‌.ಐ.ಆರ್‌. ನಡೆಸುವ ಅಧಿಕಾರವಿದೆ. ಇದು ಸುಪ್ರೀಂ ಕೋರ್ಟ್‌ ಹೇಳಿರುವ ವಿಚಾರ, ನನ್ನ ಮಾತಲ್ಲ ಎಂದು ಸ್ಪಷ್ಟಪಡಿಸಿದರು.

ಸ್ವತಂತ್ರ ಭಾರತದಲ್ಲಿ 1951ರಿಂದ 2002ರವರೆಗೆ ಒಟ್ಟು 9 ಬಾರಿ ಎಸ್‌.ಐ.ಆರ್‌. ನಡೆದಿದ್ದು, ಆ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರಗಳೇ ಅಧಿಕಾರದಲ್ಲಿದ್ದವು. ಆಗ ನಡೆದ ಎಸ್‌.ಐ.ಆರ್‌. ಬಗ್ಗೆ ಯಾವುದೇ ಪ್ರಶ್ನೆ ಕೇಳದ ಕಾಂಗ್ರೆಸ್‌, ಈಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಪ್ರಶ್ನಿಸಿದರು.

Don't understand Congress' concern about SIR: Eshwarappa lashes out    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close