ಆಗ ನನ್ನ ರಾಜೀನಾಮೆಗೆ ಮೋದಿ ಅಮಿತ್ ಶಾ ರವರೆ ಒಪ್ಪಿರಲಿಲ್ಲ, ಆದರೂ ರಾಜೀನಾಮೆ ನೀಡಿದ್ದೆ, ನಿರಪರಾಧಿಯಾಗಿ ಹೊರಗೆ ಬಂದೆ-ಈಶ್ವರಪ್ಪ-Even Modi and Amit Shah did not accept my resignation at that time, but I resigned and came out innocent - Eshwarappa

SUDDILIVE || SHIVAMOGGA

ಆಗ ನನ್ನ ರಾಜೀನಾಮೆಗೆ ಮೋದಿ ಅಮಿತ್ ಶಾ ರವರೆ ಒಪ್ಪಿರಲಿಲ್ಲ, ಆದರೂ ರಾಜೀನಾಮೆ ನೀಡಿದ್ದೆ, ನಿರಪರಾಧಿಯಾಗಿ ಹೊರಗೆ ಬಂದೆ-ಈಶ್ವರಪ್ಪ-Even Modi and Amit Shah did not accept my resignation at that time, but I resigned and came out innocent - Eshwarappa    

Modi, amithshaha


ಶಿವಮೊಗ್ಗ: ಅಡ್ಡ ಮತದಾನ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬ ನನ್ನ ಹೇಳಿಕೆಯನ್ನು ಕೆಲವರು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ಡ ಮತದಾನದ ಮೂಲಕ ಸರ್ಕಾರಗಳು ಅಸ್ಥಿರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದೇ ರೀತಿಯ ವ್ಯವಸ್ಥೆ ಮುಂದುವರಿದರೆ ಮುಂದಿನ ಸರ್ಕಾರಕ್ಕೂ ಅದೇ ಪರಿಸ್ಥಿತಿ ಎದುರಾಗಬಹುದು ಎಂದು ತಾವು ಹೇಳಿದ್ದಾಗಿ ಸ್ಪಷ್ಟಪಡಿಸಿದರು.

ಕಳೆದ ಬಾರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಸ್ತಾಪ ಮಾಡಿದ್ದಕ್ಕೆ ಅಡ್ಡ ಮತದಾನದ ಬಗ್ಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದೆ. ನಾನು ಅಡ್ಡ ಮತದಾನ ಮಾಡ್ತಾ ಇರೋದ್ರಿಂದ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರ ಮಾನ್ಯ ಡಿ.ಕೆ ಶಿವಕುಮಾರ್ ಅವರು ೧೧ ಜನ ಜನ ಅಡ್ಡ ಮತದಾನ ಆಗಿರಬೇಕಾದರೆ ನಿಮಗೂ ಕೂಡ ಹಿಂದೆ ಭಾರತೀಯ ಜನತಾ ಪಾರ್ಟಿಗೆ ಈ ರೀತಿ ಭ್ರಷ್ಟಾಚಾರ ಮಾಡಿದಂತಹ ವ್ಯವಸ್ಥೆನಲ್ಲಿ ಯಾರ್ಯಾರು ದುಡ್ಡು ತಗೊಂಡು ಪಕ್ಷಕ್ಕೆ ಬಂದಿದ್ದರೋ ಆಗ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಬರಲಿಲ್ಲ.  ಅದೇ ಸ್ಥಿತಿ ಈ ಸರ್ಕಾರಕ್ಕೂ ಬರುತ್ತದೆ ಎಂದು ಸ್ಪಷ್ಟವಾಗಿ ನಾನು ಹೇಳಿದ್ದೆ. 

ಅದನ್ನ ಸಾಕಷ್ಟು ಟ್ವಿಸ್ಟ್ ಮಾಡಿ ಏನೇನೋ ನಡೆದಿದೆ ಇರಲಿ ನಾನು ಯಾವುದಕ್ಕೂ ತಲೆ ಕೆಡೆಸಿಕೊಳ್ಳಲ್ಲ. ಜೊತೆಗೆ ನನ್ನನ್ನ. ಇವರು ಭ್ರಷ್ಟಾಚಾರ ಮಾಡಿದ್ದಕ್ಕೋಸ್ಕರ ಮಂತ್ರಿ ಸ್ಥಾನ ಕಳೆದುಕೊಂಡ್ರು ಅಂತ ಎಲ್ಲ ಆರೋಪಿಸಲಾಗುತ್ತಿದೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ನಾನೇ ನೇರವಾಗಿ  ಸಂತೋಷ್ ಜೀ ಅವರಿಗೆ ಮಾತಾಡಿದೆ ನಾನು ರಾಜೀನಾಮೆ ಕೊಡ್ತಾ ಇದ್ದೀನಿ ತನಿಖೆ ಆಗ್ಬೇಕು ಅಂತ ಹೇಳಿದ್ದೆ. ಸಂತೋಷ್ ಜೀ ಅವರು ಮೋದಿಯವರ ಹತ್ತಿರ ಅಮಿತ್ ಶಾ ಅವರ ಹತ್ತಿರ ಮಾತಾಡಿ ತಿಳಿಸ್ತೀವಿ ಅಲ್ಲಿ ತನಕ ಕೊಡಬೇಡಿ ಅಂದ್ರು. ಮಾರನೇ ದಿನ ಮತ್ತೆ ಫೋನ್ ಮಾಡಿದ್ರು ದೊಡ್ಡವರು ಇಬ್ಬರು ಹೇಳಿದ್ದಾರೆ ರಾಜೀನಾಮೆ ಬೇಡ ಅಂತ ಅಂದ್ರು,  

ನಾನು ಹೇಳಿದೆ, ನಿಮಗೆ ಕೈ ಮುಗಿತೀನಿ ನನ್ನ ಮೇಲೆ ಆಪಾದನೆ ಬಂದಿರುವಂತಹ ಈ ಸಂದರ್ಭದಲ್ಲಿ ನಾನು ಮಂತ್ರಿ ಸ್ಥಾನದಲ್ಲಿ ಇರಲ್ಲ, ದಯವಿಟ್ಟು ಪರ್ಮಿಷನ್ ಕೊಡಬೇಕು ಅಂತ ಪರ್ಮಿಷನ್ ತಗೊಂಡು ನಾನು ರಾಜೀನಾಮೆ ಕೊಟ್ಟು ತನಿಖೆ ಒತ್ತಾಯ ಮಾಡಿದ ತಕ್ಷಣ ತನಿಖೆ ಆಯ್ತು, ತನಿಖೆನಲ್ಲಿ ನಿರಪರಾಧಿ ಅಂತ ತೀರ್ಮಾನ ಆಯ್ತು. ಇದನ್ನು ಆ ಭ್ರಷ್ಟಾಚಾರದ ಜೊತೆಗೆ ಜೋಡಿಸುವಂತಹ ಪ್ರಯತ್ನ ನಡೆಸಿದ್ರಲ್ಲ ಇದು ಆಶ್ಚರ್ಯ ಎಂದು ದೂರಿದರು. 

ನಾನು ಅವತ್ತು ನಮ್ಮ‌ಪಕ್ಷಕ್ಕೆ ಬಂದವರ ಹೆಸರುಗಳನ್ನ ಹೇಳಲಿಲ್ಲ. ಈ ೧೧ ಅಡ್ಡ ಮತದಾನ ನಡೀತಲ್ಲ ಈ ಸಿದ್ಧಾಂತ ಈ ವ್ಯವಸ್ಥೆ ಸರಿಯಿಲ್ಲ, ಆ ವ್ಯವಸ್ಥೆನಲ್ಲಿ ನಮ್ಮ ಸರ್ಕಾರ ಕಳೆದುಕೊಂಡ್ವಿ. ಮಾನ್ಯ ಮುಖ್ಯಮಂತ್ರಿಗಳು ಅದೇ ವ್ಯವಸ್ಥೆ ೧೧ ಜನ ಇವತ್ತು ಅಡ್ಡ ಮತದಾನ ಮಾಡಿದ್ದಾರೆ, ಈ ವ್ಯವಸ್ಥೆ ನೀವು ಮುಂದುವರಿಸಿದರೆ, ಭ್ರಷ್ಟಾಚಾರ ಮುಂದುವರಿಸಿದಂತಾಗಿದೆ. ಇದರಿಂದ ನಿಮ್ಮ ಸರ್ಕಾರನು ಹೋಗುತ್ತೆ.  ನಾವೆಲ್ಲಾ  ದುಡ್ಡೆಲ್ಲಾ ತಗೊಂಡಿಲ್ಲ, ನಾವು ಹಾಗೆ ಸುಮ್ನೆ ಬಿಜೆಪಿಗೆ ಬಂದ್ವಿ, ನಾವು ಬಂದಿದ್ದಕ್ಕೋಸ್ಕರ ಬಿಜೆಪಿ ಸರ್ಕಾರ ಬಂತು. ಆಗ ಪಕ್ಷಕ್ಕೆ ಬಂದವರು ಪಾರ್ಟಿ ಕಟ್ಟಕ್ಕೆ ಬಂದಿದ್ರಾ? ನಿಮ್ಮ ಕೈಯಿಂದಲೇ ದುಡ್ಡು ಹಾಕಿ ಪಕ್ಷದ ಕಷ್ಟ ಸುಖಕ್ಕೆ ಭಾಗಿಯಾದ್ರಾ? ನಾನು ಹೇಳೋಕೆ ಹೊರಟಿರೋದು ನನ್ನ ಭಾವನೆನ ಸ್ಪಷ್ಟವಾಗಿ ಇಡ್ತೀನಿ ಯಾರೇ ತಿರುಚಿದ್ರು ನಂದೇನು ಅಭ್ಯಂತರ ಇಲ್ಲ. ಯಾವುದೇ ವ್ಯಕ್ತಿ ಮೇಲೆ ನಂದು ಆಪಾದನೆ ಅಲ್ಲ, ಈ ವ್ಯವಸ್ಥೆ ಬಗ್ಗೆ ನಂದು ಆಪಾದನೆ ಎಂದರು. 

ಸರ್ ಎನ್ ಸಿ ಇ ಆರ್ ಟಿ ಆರನೇ ಕ್ಲಾಸಿನ ಪುಸ್ತಕಕ್ಕೆ ಕೃಷ್ಣ ಅಂತ ಒಂದು ಹೆಸರಿಟ್ಟಿದ್ದಾರೆ ಈಗ ಅದು ವಿವಾದಕ್ಕೆ ಶುರುವಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿವಾದ ಮಾಡ್ತಿರೋದು ಯಾರು? ಕಂಸನ ಭಕ್ತಭಕ್ತ ಎಂದು ವಾಗ್ದಾಳಿ ನಡೆಸಿದರು. 

 I have only accused the system, not anyone else - Eshwarappa clarifies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close