SUDDILIVE || SHIVAMOGGA
ಜಮೀನು ವಿವಾದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ಆರೋಪ: ನಾಲ್ವರ ವಿರುದ್ಧ ಎಫ್‌ಐಆರ್-FIR against four people for allegedly assaulting a woman over a land dispute
ತೀರ್ಥಹಳ್ಳಿ, ಜೂ. 18: ತಾಲೂಕಿನ ಬೆಕ್ಕನೂರು ಗ್ರಾಮದ ಗಿಣಿಯ ಪ್ರದೇಶದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ನಾಲ್ವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಸೌಮ್ಯಾ ಬಿ.ವಿ. (39) ಅವರು ನೀಡಿದ ದೂರಿನ ಮೇರೆಗೆ, ರಾಘವೇಂದ್ರ, ಗುರುಮೂರ್ತಿ, ಲಕ್ಷ್ಮೀಕಾಂತ್ ಹಾಗೂ ಶೈಲಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಢಿ ನಡೆಸಿದ ಅವರು ಎಡಿಎಲ್ ಆರ್ ಅವರಿಂದ ಅನ್ಯಾಯವಾಗಿದೆ ತಮಗೆ ಇರುವ ಎರಡು ಎಕರೆ ಜಮೀನಿನ ಸರ್ವೆ ನಡೆಸಲಾಗುತ್ತಿಲ್ಲ ಎಂದು ದೂರಿದರು.
ದೂರಿನ ಪ್ರಕಾರ, ಮೇ 27ರಂದು ಮಧ್ಯಾಹ್ನ ಸುಮಾರು 12.15ರ ವೇಳೆಗೆ ಜಮೀನಿನಲ್ಲಿ ಇದ್ದ ಸಂದರ್ಭದಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ದೂರುದಾರರ ಬಟ್ಟೆ ಹರಿದುಹೋಗುವಂತೆ ಎಳೆದಾಡಿದ್ದು, ದೈಹಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ದೂರುದಾರರು ಹಾಗೂ ಅವರ 13 ವರ್ಷದ ಪುತ್ರನಿಗೂ ಗಾಯಗಳಾಗಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 158/2026 ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

