ನರಸಿಂಹ ಹತ್ಯೆ ಬಳಿಕ ಪ್ರತೀಕಾರದ ಸುಳಿವು? ಸಾಮಾಜಿಕ ಜಾಲತಾಣದ ಸ್ಟೇಟಸ್‌ಗಳಿಂದ ಆತಂಕ-Hint of revenge after Narasimha's murder? Social media statuses raise concerns

SUDDILIVE || SHIVAMOGGA

ನರಸಿಂಹ ಹತ್ಯೆ ಬಳಿಕ ಪ್ರತೀಕಾರದ ಸುಳಿವು? ಸಾಮಾಜಿಕ ಜಾಲತಾಣದ ಸ್ಟೇಟಸ್‌ಗಳಿಂದ ಆತಂಕ-Hint of revenge after Narasimha's murder? Social media statuses raise concerns    
Social, Media

ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರತೀಕಾರದ ದಾಳಿ ನಡೆಯುವ ಸಾಧ್ಯತೆ ಕುರಿತು ಚರ್ಚೆಗಳು ಜೋರಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ಸ್ಟೇಟಸ್‌ಗಳು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿವೆ.

ನರಸಿಂಹನ ಆತ್ಮೀಯ ಸ್ನೇಹಿತ ಹಾಗೂ ರೌಡಿಶೀಟರ್ ಎಂದು ಗುರುತಿಸಲ್ಪಟ್ಟಿರುವ ಕಾಡಾ ಕಾರ್ತಿಕ್ ಮತ್ತು ಮತ್ತೊಂದು ಕೊಲೆ ಪ್ರಕರಣದಲ್ಲಿ ಎ–2 ಆರೋಪಿಯಾಗಿರುವ ಬಜರಂಗಿ ನಿತಿನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪ್ರತೀಕಾರದ ಸುಳಿವು ನೀಡುವ ರೀತಿಯ ಸ್ಟೇಟಸ್‌ಗಳನ್ನು ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ.


ವಿಶೇಷವಾಗಿ ಬಜರಂಗಿ ನಿತಿನ್ ಖಾತೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಹಾಗೂ ಸಂದೇಶಗಳು ನರಸಿಂಹ ಹತ್ಯೆಗೆ ಪ್ರತಿಕ್ರಿಯೆ ಮತ್ತು ಪ್ರತೀಕಾರದ ಉಲ್ಲೇಖಗಳನ್ನು ಒಳಗೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಈ ಸ್ಟೇಟಸ್‌ಗಳ ಸ್ಕ್ರೀನ್‌ಶಾಟ್‌ಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿರುವುದಾಗಿ ತಿಳಿದುಬಂದಿದೆ. ವೈರಲ್ ಆಗಿರುವ ಪೋಸ್ಟ್‌ಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಕಲೆಹಾಕುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನರಸಿಂಹ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ ಸಾಮಾಜಿಕ ಜಾಲತಾಣದ ಈ ಬೆಳವಣಿಗೆಗಳು ನಗರದ ಜನರಲ್ಲಿ ಆತಂಕ ಮೂಡಿಸಿವೆ.

Hint of revenge after Narasimha's murder? Social media statuses raise concerns

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close