SUDDILIVE || SHIVAMOGGA
ಜೂನ್ 14ರಂದು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ-Power Outage on june 14th on Shivamogga rural
ಶಿವಮೊಗ್ಗ: ಮೆಸ್ಕಾಂ ವತಿಯಿಂದ 110/11 ಕೆವಿ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 14, 2026ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಲ್ಲಿ ಹಾರ್ನಹಳ್ಳಿ, ಕಲ್ಲುಗಂಗೂರು, ಹೊಸಹಳ್ಳಿ, ಬಸವನ ಲೇಔಟ್, ಉಷಾ ನರ್ಸಿಂಗ್ ಹೋಂ ಸುತ್ತಮುತ್ತಲಿನ ಪ್ರದೇಶ, ಎಪಿಎಂಸಿ ರಸ್ತೆ, ದಾವಣಗೆರೆ ರಸ್ತೆ, ಚೆನ್ನಕೇಶವ ನಗರ, ಶರಾವತಿ ನಗರ, ಆದಿತ್ಯ ನಗರ, ಶಿವಪ್ಪ ನಾಯಕ ನಗರ, ಸಂತೆಕಡೂರು, ರಂಗನಾಥ ಬಡಾವಣೆ, ಗುತ್ತ್ಯಪ್ಪ ಕಾಲೋನಿ, ನಿದಿಗೆ, ಆಯನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸೇರಿವೆ.
ನಿಗದಿತ ಅವಧಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಬಳಕೆದಾರರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮೆಸ್ಕಾಂಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
Power Outage on june 14th on Shivamogga rural

