11 ಬೇಡಿಕೆ ಈಡೇರಿಸದಿದ್ದರೆ ರಾಷ್ಟ್ರಪತಿ ಭವನ, ರಾಜ್ಯ ಭವನಕ್ಕೆ ಮುತ್ತಿಗೆ: ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಎಚ್ಚರಿಕೆ-If 11 demands are not met, Rashtrapati Bhavan, Rajya Bhavan will be besieged: Dr. H.S. Nagendra Heddur warns

SUDDILIVE || SHIVAMOGGA

11 ಬೇಡಿಕೆ ಈಡೇರಿಸದಿದ್ದರೆ ರಾಷ್ಟ್ರಪತಿ ಭವನ, ರಾಜ್ಯ ಭವನಕ್ಕೆ ಮುತ್ತಿಗೆ: ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಎಚ್ಚರಿಕೆ-If 11 demands are not met, Rashtrapati Bhavan, Rajya Bhavan will be besieged: Dr. H.S. Nagendra Heddur warns   

Rastrapathi, Bhavan

ಶಿವಮೊಗ್ಗ, ಜೂ. 29: ದೇಶದ ಎಲ್ಲಾ ರಾಜ್ಯಗಳ ಡಿ ಗ್ರೂಪ್, ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ 11 ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಈಡೇರಿಸಬೇಕು. ಎಂಟನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿ ಎಲ್ಲ ನೌಕರರನ್ನು ಕಾಯಂಗೊಳಿಸಬೇಕು. ಇಲ್ಲವಾದರೆ ರಾಷ್ಟ್ರಪತಿ ಭವನ ಹಾಗೂ ಬೆಂಗಳೂರಿನ ರಾಜ್ಯ ಭವನಕ್ಕೆ ಬೃಹತ್ ಮುತ್ತಿಗೆ ಹಾಕಲಾಗುವುದು ಎಂದು ಆಲ್ ಇಂಡಿಯಾ ಸ್ಟೇಟ್ ಗವರ್ನ್‌ಮೆಂಟ್ ಡಿ ಗ್ರೂಪ್ ನೌಕರರ ಸಂಘದ ರಾಷ್ಟ್ರೀಯ ನಾಯಕ, ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಕಾರ್ಯದರ್ಶಿ, ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲಾ ರಾಜ್ಯಗಳಲ್ಲಿರುವ ಡಿ ಗ್ರೂಪ್ ನೌಕರರು, ದಿನಗೂಲಿ ನೌಕರರು, ಅಂಗನವಾಡಿ ಶಿಕ್ಷಕರು, ಅಂಗನವಾಡಿ ಸಹಾಯಕರು, ಹೊರಗುತ್ತಿಗೆ, ಗುತ್ತಿಗೆ ಆಧಾರಿತ ನೌಕರರು ಹಾಗೂ ಗ್ರಾಮ ಪಂಚಾಯಿತಿ ಸಹಾಯಕರು ಸೇರಿದಂತೆ ಎಲ್ಲರನ್ನು ಎಂಟನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡಿಸಿ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿದರು.

ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ಹಂತದಲ್ಲಿ ರಾಷ್ಟ್ರಪತಿ ಭವನಕ್ಕೆ ದೇಶವ್ಯಾಪಿ ಮುತ್ತಿಗೆ ಹಾಕಲಾಗುವುದು. ಈ ಹೋರಾಟದಲ್ಲಿ ದೇಶದ 26 ರಾಜ್ಯಗಳಿಂದ ಸಾವಿರಾರು ಡಿ ಗ್ರೂಪ್ ನೌಕರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ರೀತಿಯ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ರಾಜ್ಯ ಭವನದ ಎದುರು ಸಹ ಆಯೋಜಿಸಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಎಚ್ಚರಿಕೆ ನೀಡಿದರು.

If 11 demands are not met, Rashtrapati Bhavan, Rajya Bhavan will be besieged: Dr. H.S. Nagendra Heddur warns   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close