SUDDILIVE || SHIVAMOGGA
25 ವರ್ಷದಿಂದ ಜಗನಗನಾಥ್ ಮನೆಗೆ ಬಂದಿಲ್ಲ, ಇಬ್ಬರು ಮಕ್ಕಳ ಜೊತೆ ತಾಯಿ ನಾಪತ್ತೆ-Jagannath has not returned home for 25 years, mother goes missing with two children
ಶಿವಮೊಗ್ಗ, ಜೂನ್ 4: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿರುವ ಕುರಿತು ಪ್ರಕರಣಗಳು ದಾಖಲಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
25 ವರ್ಷಗಳಿಂದ ಜಗನ್ನಾತ ನಾಯ್ಕ ನಾಪತ್ತೆ
ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಆರ್. ಜಗನ್ನಾತ ಬಿನ್ ರಂಗಪ್ಪ ನಾಯ್ಕ ಎಂಬವರು ಸುಮಾರು 25 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹೋದ ಬಳಿಕ ಇದುವರೆಗೆ ಮರಳಿ ಬಂದಿಲ್ಲ. 5.9 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡನೆಯ ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿರುವ ಅವರು ಕನ್ನಡಕ ಧರಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗನ್ನಾತ ನಾಯ್ಕ ಅವರ ಕುರಿತು ಮಾಹಿತಿ ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆ, ಸಿಪಿಐ ಕಚೇರಿ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ
ಇನ್ನೊಂದು ಪ್ರಕರಣದಲ್ಲಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆಮನೆ ಗ್ರಾಮದ ನಿವಾಸಿ ಮಹೇಶ್ ಅವರ ಪತ್ನಿ ಪೂರ್ಣಿಮಾ (27) ಅವರು ತಮ್ಮ ಇಬ್ಬರು ಪುತ್ರರಾದ ಧೃವ (8) ಮತ್ತು ಧನವೀರ್ (2) ಅವರನ್ನು ಕರೆದುಕೊಂಡು ಮೇ 31 ರಂದು ಮನೆಯಿಂದ ತೆರಳಿದ್ದು, ಇದುವರೆಗೆ ವಾಪಸ್ಸಾಗಿಲ್ಲ.
ಪೂರ್ಣಿಮಾ ಅವರು 5.1 ಅಡಿ ಎತ್ತರ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ತೆರಳುವ ವೇಳೆ ಆಕಾಶ ನೀಲಿ ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ವೇಲ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಅವರ ಹಿರಿಯ ಪುತ್ರ ಧೃವ 3 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಬಿಳಿ-ಕಪ್ಪು ಬಣ್ಣದ ತುಂಬುತೋಳಿನ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದನು. ಕಿರಿಯ ಪುತ್ರ ಧನವೀರ್ 2 ಅಡಿ ಎತ್ತರ ಹೊಂದಿದ್ದು, ಬಿಳಿ ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದನು.
ಮಾಹಿತಿ ಇದ್ದರೆ ತಿಳಿಸಿ
ಜಗನ್ನಾಥ್ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಮಾಳೂರು ಪೊಲೀಸ್ ಠಾಣೆ-08181-235142, ಮಹಿಳ ಪೂರ್ಣಿಮ ಮತ್ತು ಮಕ್ಕಳು ಪತ್ತೆಯಾದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗ, ಶಿಕಾರಿಪುರ ಉಪವಿಭಾಗದ ಡಿಎಸ್‌ಪಿ ಕಚೇರಿ 08187-222443 ಅಥವಾ 9480803323 ಅಥವಾ ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.
"ಸಾರ್ವಜನಿಕರ ಸಹಕಾರದಿಂದ ನಾಪತ್ತೆಯಾದವರ ಪತ್ತೆ ಕಾರ್ಯ ವೇಗಗೊಳ್ಳಲಿದೆ" ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


