SUDDILIVE || BHADRAVATHI
ಫಾರಂ ಹೌಸ್‌ನಿಂದ ನಾಯಿ ಹೊತ್ತೊಯ್ದ ಚಿರತೆ-Leopard carrying dog from farmhouse
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿರುವ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಎಂಬುವರ ಟಿವಿಎಸ್ ಫಾರಂನಲ್ಲಿ ಭಾನುವಾರ ರಾತ್ರಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇದೇ ತೋಟದಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೂ ಇದೇ ರೀತಿಯಲ್ಲಿ ಸಾಕು ನಾಯಿಯನ್ನು ಚಿರತೆ ಹೊತ್ತು ಹೋಗಿತ್ತು. ಈಗ ಎರಡನೇ ಬಾರಿ ಘಟನೆ ನಡೆದಿದೆ.
ಚಿರತೆಯು ನಾಯಿಯನ್ನು ಹೊತ್ತು ಹೋಗುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ತೋಟದಲ್ಲಿ ಸುಜಾತಾ ತಮ್ಮ ರಕ್ಷಣೆಗಾಗಿ ದೊಡ್ಡ ಹೆಣ್ಣು ಕರಿ ನಾಯಿಯನ್ನು ಸಾಕಿದ್ದರು. ಪ್ರತಿದಿನದಂತೆ ಬೆಳಗ್ಗೆ ಎದ್ದು ವಾಕಿಂಗ್ ಹೋಗಲು ಸಿದ್ದರಾಗಿ ಹೊರಗಡೆ ಬಂದು ನೋಡಿದರೆ ಎರಡು ಮರಿನಾಯಿಗಳು ಮಾತ್ರ ಇದ್ದವು. ಅನುಮಾನ ಬಂದು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾಗ ಬೆಳಗ್ಗಿನ ಜಾವ 2:03 ನಿಮಿಷದಲ್ಲಿ ಒಂದು ಚಿರತೆ ಬಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುವ ದೃಶ್ಯ ಕಂಡುಬಂದಿದೆ.
ಅರಣ್ಯ ಇಲಾಖೆ ಬೋನು ಇಟ್ಟಿದ್ದು ಪ್ರಯೋಜನವಾಗಿಲ್ಲ. ಚಿರತೆ ಕಂಡು ಮನೆಯವರು ಹಾಗೂ ಗ್ರಾಮಸ್ಥರು ಭಯಗೊಂಡಿದ್ದಾರೆ.
Leopard carrying dog from farmhouse

