ಬೂತ್ ಅಧ್ಯಕ್ಷೆ ಶಾಂತಮ್ಮನವರ ಮನೆಯಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ: ಬೊಮ್ಮನಕಟ್ಟೆಯಲ್ಲಿ ಪಾದಯಾತ್ರೆ, ವಿಶೇಷ ಪೂಜೆ-MLA Channabasappa stays at booth chairperson Shantamma's house: Walk in Bommanakkatte, special puja

 SUDDILIVE || SHIVAMOGGA

ಬೂತ್ ಅಧ್ಯಕ್ಷೆ ಶಾಂತಮ್ಮನವರ ಮನೆಯಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ: ಬೊಮ್ಮನಕಟ್ಟೆಯಲ್ಲಿ ಪಾದಯಾತ್ರೆ, ವಿಶೇಷ ಪೂಜೆ-MLA Channabasappa stays at booth chairperson Shantamma's house: Walk in Bommanakkatte, special puja

Special, pooja

Special, pooja

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಅತಿಹೆಚ್ಚು ದಿನಗಳ ಕಾಲ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಐತಿಹಾಸಿಕ ಹೆಗ್ಗಳಿಕೆಯ ಹಿನ್ನೆಲೆಯಲ್ಲಿ, ನಗರ ಬಿಜೆಪಿ ಹಾಗೂ ಶಾಸಕರ ವತಿಯಿಂದ ಬೂತ್ ಅಧ್ಯಕ್ಷರ ಮನೆಯಲ್ಲಿ ವಾಸ್ತವ್ಯ ಹೂಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಎಸ್. ಚನ್ನಬಸಪ್ಪ ಅವರು ಇಂದು ಬೊಮ್ಮನಕಟ್ಟೆ ವಾರ್ಡ್‌ನಲ್ಲಿ ಪಾದಯಾತ್ರೆ ಹಾಗೂ ಕಾರ್ಯಕರ್ತರ ಸಭೆ ನಡೆಸಿದರು.

ದೇವಸ್ಥಾನಗಳಿಗೆ ಭೇಟಿ, ವಿಶೇಷ ಪೂಜೆ

ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಚನ್ನಬಸಪ್ಪ ಅವರು ಬೊಮ್ಮನಕಟ್ಟೆಯ ಆದಿಶಕ್ತಿ ದೇವತೆ ಮುತ್ತು ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ತದನಂತರ ಬೊಮ್ಮನಕಟ್ಟೆಯ ಮುಖ್ಯ ರಸ್ತೆಯಿಂದ ಪಾದಯಾತ್ರೆ ಆರಂಭಿಸಿದ ಶಾಸಕರು, ಬೂತ್ ಅಧ್ಯಕ್ಷೆ ಶಾಂತಮ್ಮನವರ ಮನೆ ಸಮೀಪವಿರುವ ಓಂ ಶಕ್ತಿ ಹಾಗೂ ಮತ್ತೊಂದು ಮುತ್ತು ಮಾರಿಯಮ್ಮ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು.

ಶಾಸಕರಿಗೆ ಆರತಿ ಬೆಳಗಿ ಸ್ವಾಗತಿಸಿದ ಶಾಂತಮ್ಮ

ಪಾದಯಾತ್ರೆಯ ಬಳಿಕ ಕಾರ್ಯಕರ್ತರ ಸಭೆಗೂ ಮುನ್ನ, ಬೂತ್ ಅಧ್ಯಕ್ಷೆ ಶಾಂತಮ್ಮನವರ ಮನೆಗೆ ಶಾಸಕರು ಆಗಮಿಸಿದರು. ಈ ವೇಳೆ ಶಾಂತಮ್ಮ ಹಾಗೂ ಕುಟುಂಬಸ್ಥರು ಶಾಸಕರಿಗೆ ಆರತಿ ಬೆಳಗಿ, ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡರು. ಮನೆಗೆ ಪ್ರವೇಶಿಸಿದ ಶಾಸಕರು, ಶಾಂತಮ್ಮನವರ ತಂದೆ-ತಾಯಿಯ ಭಾವಚಿತ್ರಕ್ಕೆ ನಮಸ್ಕರಿಸಿ, ಮನೆಯ ದೇವರ ಆಶೀರ್ವಾದ ಪಡೆದರು.

ಹೀಗೆಲ್ಲ ಹೇಳಬೇಡಿ": ಕುಟುಂಬಸ್ಥರಿಗೆ ಶಾಸಕರ ಧೈರ್ಯ

ಶಾಸಕರು ತಮ್ಮ ಮನೆಗೆ ಆಗಮಿಸಿದಾಗ, "ನಮ್ಮದು ತುಂಬಾ ಸಣ್ಣ ಮನೆ" ಎಂದು ಶಾಂತಮ್ಮನವರ ಕುಟುಂಬದವರು ಸಂಕೋಚದಿಂದ ನುಡಿದರು. ತಕ್ಷಣವೇ ಅವರ ಬೆನ್ನು ತಟ್ಟಿದ ಶಾಸಕ ಚನ್ನಬಸಪ್ಪ ಅವರು, "ಹೀಗೆಲ್ಲ ಹೇಳಬೇಡಿ, ಕಾರ್ಯಕರ್ತರ ಮನೆಯೇ ನಮಗೆ ದೇವಸ್ಥಾನ" ಎಂದು ಭಾವುಕರಾಗಿ ನುಡಿದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಇದಾದ ಬಳಿಕ ಸ್ಥಳೀಯ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ ಶಾಸಕರು, ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

MLA Channabasappa stays at booth chairperson Shantamma's house: Walk in Bommanakkatte, special puja



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close