SUDDILIVE || SHIVAMOGGA
ಬಸವ ಹಿಂದೂ ಸಮಾವೇಶಕ್ಕೆ ಅವಕಾಶ ನೀಡದಂತೆ ಮಹಾಸಭಾ ಆಗ್ರಹ- Mahasabha demands not to allow Basava Hindu Samavesha
ಶಿವಮೊಗ್ಗ: ಬಸವ ಕಲ್ಯಾಣದಲ್ಲಿ ಜೂ. 28ರಂದು ಕನ್ಹೇರಿ ಶ್ರೀಗಳ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಬಸವ ಹಿಂದೂ ಸಮಾವೇಶವನ್ನು ಕೈಬಿಡಬೇಕು. ಸರ್ಕಾರ ಯಾವುದೇ ಕಾರಣಕ್ಕೂ ಸಮಾವೇಶ ನಡೆಸಲು ಅನುಮತಿ ನೀಡಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವೈ.ಆರ್., ಕನ್ಹೇರಿ ಶ್ರೀಗಳು ಬಸವಣ್ಣನವರ ಹೆಸರು ಹೇಳಿಕೊಂಡು ಬಸವಣ್ಣನವರ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಸವಣ್ಣನವರನ್ನು ಉಗ್ರಗಾಮಿ ಎಂದು ಕರೆಯುತ್ತಾರೆ. ಇದು ಭಕ್ತರಿಗೆ ನೋವುಂಟು ಮಾಡಿದೆ. ಇಂತಹ ಶ್ರೀಗಳ ನೇತೃತ್ವದಲ್ಲಿ ಅದು ಪವಿತ್ರ ಬಸವ ಕಲ್ಯಾಣದಲ್ಲಿ ಬಸವ ಹಿಂದೂ ಸಮಾವೇಶದ ಹೆಸರಿನಲ್ಲಿ ಸಮಾವೇಶ ನಡೆಸುತ್ತಿರುವುದು ಖಂಡನೀಯ ಎಂದರು.
ಶರಣರ ವಚನಗಳನ್ನು ಕನ್ಹೇರಿ ಶ್ರೀಗಳು ತಪ್ಪಾಗಿ ಅರ್ಥೈಸುತ್ತಾ ಹೊರಟಿದ್ದಾರೆ. ಹೀಗೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುತ್ತಿರುವ ಶ್ರೀಗಳ ನೇತೃತ್ವದಲ್ಲಿ ಈ ಸಮಾವೇಶ ನಡೆಯಕೂಡದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಎಂ.ಎಸ್. ತಿಮ್ಮಪ್ಪ ಅರಬಿಳಚಿ, ಶಿವಕುಮಾರ್ ಜಿ.ಎಸ್., ಸುಭಾಷ್ ಚಂದ್ರ, ಹಾಲೇಶಪ್ಪ ಹೆಚ್.ಎಸ್., ಪಂಚಾಕ್ಷರಿ, ಮರುಳಸಿದ್ಧಪ್ಪ ಮುಂತಾದವರಿದ್ದರು.
Mahasabha demands not to allow Basava Hindu Samavesha
