SUDDILIVE || SHIVAMOGGA
ಭದ್ರಾವತಿ, ಜೂನ್ 24: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ಭದ್ರಾವತಿ ಉಪ ವಿಭಾಗದ ವತಿಯಿಂದ ಜೂನ್ 25ರಂದು 5 ಕಿಲೋಮೀಟರ್ ಜಾಗೃತಿ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ.
“ಮಾದಕ ವಸ್ತುಗಳಿಗೆ ಇಲ್ಲ ಎನ್ನಿ – Say No To Drugs” ಎಂಬ ಘೋಷವಾಕ್ಯದಡಿ ನಡೆಯುವ ಈ ಮ್ಯಾರಥಾನ್‌ನಲ್ಲಿ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಮ್ಯಾರಥಾನ್ ಓಟವು ಜೂನ್ 25ರಂದು ಬೆಳಿಗ್ಗೆ 6 ಗಂಟೆಗೆ ಭದ್ರಾವತಿಯ ಶಿವಾಜಿ ಸರ್ಕಲ್‌ನಿಂದ ಆರಂಭವಾಗಲಿದೆ. ಅಲ್ಲಿಂದ ರಂಗಪ್ಪ ಸರ್ಕಲ್, ಎಂ.ಜಿ. ಸರ್ಕಲ್, ಹಾಲಪ್ಪ ಸರ್ಕಲ್, ಅಂಡರ್ ಬ್ರಿಡ್ಜ್ ಮೂಲಕ ಸಾಗುವ ಓಟವು ಅಪ್ಪರ್ ಹುತ್ತಾ ಪ್ರದೇಶದಲ್ಲಿ ಮುಕ್ತಾಯಗೊಳ್ಳಲಿದೆ.
ಭಾಗವಹಿಸುವ ಸ್ಪರ್ಧಿಗಳು ಬೆಳಿಗ್ಗೆ 5.45ರೊಳಗೆ ಶಿವಾಜಿ ಸರ್ಕಲ್ ಬಳಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಓಟದಲ್ಲಿ ಭಾಗವಹಿಸುವ ಎಲ್ಲರೂ ಶಿಸ್ತು ಪಾಲಿಸಿ, ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನಕ್ಕೆ ಕೈಜೋಡಿಸುವಂತೆ ಪೊಲೀಸ್ ಇಲಾಖೆ ಕೋರಿದೆ.
“ಆರೋಗ್ಯಕರ ಸಮುದಾಯಕ್ಕಾಗಿ ಒಟ್ಟಾಗಿ ಓಡೋಣ” ಎಂಬ ಸಂದೇಶದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮವು ಯುವಕರಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಮಾದಕ ವಸ್ತುಗಳಿಂದ ದೂರವಿರುವ ಮನೋಭಾವ ಬೆಳೆಸುವ ಉದ್ದೇಶ ಹೊಂದಿದೆ.
Marathon in Bhadravati tomorrow
