SUDDILIVE || SHIVAMOGGA
ತಾಯಿ-ಇಬ್ಬರು ಮಕ್ಕಳು ಕಾಣೆ; ಮಾಹಿತಿ ನೀಡಲು ಪೊಲೀಸರ ಮನವಿ-Mother and two children missing; Police appeal for information
ಶಿವಮೊಗ್ಗ, ಜೂ.19: ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ನಿವಾಸಿ ನಾಗವೇಣಿ (31) ಅವರು ತಮ್ಮ ಇಬ್ಬರು ಮಕ್ಕಳಾದ ಅಶ್ವತ್ (14) ಹಾಗೂ ಅಶ್ವಿನ್ (12) ಅವರನ್ನು ಕರೆದುಕೊಂಡು ಜೂನ್ 17ರಂದು ಮನೆಯಿಂದ ತೆರಳಿದ್ದು, ಇದುವರೆಗೆ ವಾಪಸ್ಸಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗವೇಣಿ ಅವರು ವಿಚ್ಛೇದಿತೆಯಾಗಿದ್ದು, ಕಳೆದ ಒಂದು ವರ್ಷದಿಂದ ತಮ್ಮ ಸಹೋದರ ನವೀನ್ ಕುಮಾರ್ ಅವರ ಮನೆಯಲ್ಲಿ ವಾಸವಾಗಿದ್ದರು. ಜೂನ್ 17ರಂದು ಮಕ್ಕಳೊಂದಿಗೆ ಮನೆಯಿಂದ ಹೊರಟ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕಾಣೆಯಾದ ನಾಗವೇಣಿ ಅವರು ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ತೆರಳುವ ವೇಳೆ ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಹಾಗೂ ವೇಲ್ ಧರಿಸಿದ್ದರು.
ಅವರ ಪುತ್ರ ಅಶ್ವತ್ ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗಪ್ಪು ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದು, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾನೆ. ಮತ್ತೊಬ್ಬ ಪುತ್ರ ಅಶ್ವಿನ್ ಸುಮಾರು 3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗಪ್ಪು ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದು, ಕಪ್ಪು ಬಣ್ಣದ ಶರ್ಟ್ ಹಾಗೂ ನೀಲಿ ಪ್ಯಾಂಟ್ ಧರಿಸಿದ್ದಾನೆ.
ಈ ತಾಯಿ ಮತ್ತು ಮಕ್ಕಳ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗ (08182-261413), ಡಿಎಸ್‌ಪಿ ಶಿಕಾರಿಪುರ ಉಪವಿಭಾಗ (08187-222443 / 9480803323) ಅಥವಾ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ (9480803366) ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
