ಪಿಡಿಒಗಳ ಹೆಸರು ಬರೆದು ನೀರುಗಂಟಿ ಆತ್ಮಹತ್ಯೆ- ಮೃತನ ಜೇಬಿನಲ್ಲಿ ಸಿಕ್ಕ ಚೀಟಿ ಆಧರಿಸಿ ಎಫ್‌ಐಆರ್-Neeruganti commits suicide by writing PDOs' names - FIR based on note found in deceased's pocket

 SUDDILIVE || THIRTHAHALLI

ಪಿಡಿಒಗಳ ಹೆಸರು ಬರೆದು ನೀರುಗಂಟಿ ಆತ್ಮಹತ್ಯೆ-ಮೃತನ ಜೇಬಿನಲ್ಲಿ ಸಿಕ್ಕ ಚೀಟಿ ಆಧರಿಸಿ ಎಫ್‌ಐಆರ್-Neeruganti commits suicide by writing PDOs' names - FIR based on note found in deceased's pocket     




ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಟಗಾರು-ಕಟ್ಟೆಹಕ್ಕಲು ಗ್ರಾಮದಲ್ಲಿ 39 ವರ್ಷದ ನೀರುಗಂಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮೃತನ ಜೇಬಿನಲ್ಲಿ ಪತ್ತೆಯಾದ ಡೆತ್ ನೋಟ್ ಆಧರಿಸಿ ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತರನ್ನು ಸಂತೋಷ್ ಮುದ್ದು ಪೂಜಾರಿ (39) ಎಂದು ಗುರುತಿಸಲಾಗಿದೆ. ಅವರು ಕಳೆದ ಸುಮಾರು 10 ವರ್ಷಗಳಿಂದ ತಾಲೂಕಿನ ಕಟ್ಟೆಹಕ್ಲು ಗ್ರಾಮದ ಸಾಲಗಡಿ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತರ ತಾಯಿ ಸುಶೀಲಮ್ಮ ಮುದ್ದು ಪೂಜಾರಿ ನೀಡಿದ ದೂರಿನ ಪ್ರಕಾರ, ಮೇ 29ರಂದು ಕೆಲಸಕ್ಕೆ ತೆರಳಿದ್ದ ಸಂತೋಷ್ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ ಬಳಿಕ ಮೇ 30ರಂದು ಬೆಳಿಗ್ಗೆ ಕಟಗಾರು ಗ್ರಾಮದ ಸರ್ವೆ ನಂ. 21ರ ಜಾಗದಲ್ಲಿದ್ದ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ಶವ ಪರಿಶೀಲನೆ ವೇಳೆ ಸಂತೋಷ್ ಅವರ ಟಿ-ಶರ್ಟ್ ಜೇಬಿನಲ್ಲಿ ಒಂದು ಚೀಟಿ ಪತ್ತೆಯಾಗಿದ್ದು, ಅದರಲ್ಲಿ ತನ್ನ ಸಾವಿಗೆ ಪಿಡಿಒ ಜಯಂತಿ, ನಾಗರತ್ನ ಮತ್ತು ಪ್ರತಾಪ್ ಕಾರ ಎಂದು ಬರೆದಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಆಗಾಗ್ಗೆ ಕೆಲಸದ ವಿಚಾರವಾಗಿ ಸಂತೋಷ್ ಅವರನ್ನು ಕರೆದು ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತನ ತಾಯಿ ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಡಿಒ ಜಯಂತಿ, ನಾಗರತ್ನ ಹಾಗೂ ಪ್ರತಾಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 108 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

Neeruganti commits suicide by writing PDOs' names - FIR based on note found in deceased's pocket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close