SUDDILIVE || SHIVAMOGGA
ತೀರ್ಥಹಳ್ಳಿಯ ಮುಡಬಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಐರಾವತ ಬಸ್ ಅಪಘಾತ-Airavata bus accident near Mudaba in Thirthahalli after driver loses control
ತೀರ್ಥಹಳ್ಳಿ : ಮುಡುಬಾ ಸಮೀಪ ಇಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಡಿಕೆ ತೋಟಕ್ಕೆ ನುಗ್ಗಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬಿಟ್ಟು ತೋಟದೊಳಗೆ ನುಗ್ಗಿದ್ದು, ತೋಟದ ಕೆಲ ಅಡಿಕೆ ಗಿಡಗಳು ಹಾಗೂ ಬೇಲಿಗೆ ಹಾನಿಯಾಗಿದೆ. ಘಟನೆಯ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
Airavata bus accident near Mudaba in Thirthahalli after driver loses control

