ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ- The last date to apply for this scheme is July 31

SUDDILIVE || SHIVAMOGGA

ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ-  The last date to apply for this scheme is July 31

Scheme, apply

ಶಿವಮೊಗ್ಗ, ಜೂ 23(ಕರ್ನಾಟಕ ವಾರ್ತೆ): 2026-27ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿಕಾರಿಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಫಸಲು ಬಿಡುವಂತಹ ಅಡಿಕೆ, ಮಾವು, ಕಾಳುಮೆಣಸು ಮತ್ತು ನಾಟಿ ಮಾಡಿರುವಂತಹ ಶುಂಠಿ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದೆ. ಆಸಕ್ತ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಗ್ರಾಮ ಒನ್ ಅಥವಾ ಬ್ಯಾಂಕುಗಳಲ್ಲಿ ದಿನಾಂಕ 31-07-2026 ರ ಒಳಗೆ ವಿಮೆ ಕಂತನ್ನು ಪಾವತಿಸಬೇಕಾಗಿ ವಿನಂತಿಸಲಾಗಿದೆ.

ಅಡಿಕೆ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,28,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 2560 ಅಥವಾ ಪ್ರತಿ ಗುಂಟೆಗೆ ರೂ. 64 ಪಾವತಿಸಬೇಕು.

ಮಾವು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 80,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 3200 ಅಥವಾ ಪ್ರತಿ ಗುಂಟೆಗೆ ರೂ. 80 ಪಾವತಿಸಬೇಕು.

ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 47,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 1692 ಅಥವಾ ಪ್ರತಿ ಗುಂಟೆಗೆ ರೂ. 42.30 ಪಾವತಿಸಬೇಕು.

ಶುಂಠಿ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,30,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 2600 ಅಥವಾ ಪ್ರತಿ ಗುಂಟೆಗೆ ರೂ. 65 ಪಾವತಿಸಬೇಕು. 

ಮೇಲ್ಕಂಡ ಬೆಳೆಗಳನ್ನು ಬೆಳೆದಿರುವ ತಾಲೂಕಿನ ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಶಿಕಾರಿಪುರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

The last date to apply for this scheme is July 31

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close