ವಿಜೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನ ಮುಂದುವರೆಸಿದರೆ ತಪ್ಪೇನಿಲ್ಲ-ಬಿ.ವೈ.ರಾಘವೇಂದ್ರ- There is nothing wrong in continuing Vijendra as BJP state president - B.Y. Raghavendra

SUDDILIVE || SHIVAMOGGA

ವಿಜೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನ ಮುಂದುವರೆಸಿದರೆ ತಪ್ಪೇನಿಲ್ಲ-ಬಿ.ವೈ.ರಾಘವೇಂದ್ರ- There is nothing wrong in continuing Vijendra as BJP state president - B.Y. Raghavendra    

Raghavendra, vijendra

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮತ್ತು ಮುಂದುವರೆಸುವ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರವೆಂದು ಸಂಸದ ರಾಘವೇಂದ್ರ ತಿಳಿಸಿದರು. 

ಅವರು ಮಾಧ್ಯಮಗಳ ಜೊತೆ ಮಾತನಾಡಿ, ವಿಜೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಅವರ ನೇತೃತ್ವದಲ್ಲಿ ಎಷ್ಟು ಹೋರಾಟಗಳು, ಪಾದಯಾತ್ರೆಗಳು ನಡೆದವು. ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗಳು ನಡೆದವು. ಹಾಗಾಗಿ ಅವರನ್ನ ಮುಂದು ವರೆಸಿದರೆ ತಪ್ಪೇನಿಲ್ಲ  ಎಂದು ಹೇಳಿದರು. 

​ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಕುರಿತು ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಪಕ್ಷದಿಂದ ಉಚ್ಚಾಟಿತರಾದ ನಾಯಕರನ್ನು ಮತ್ತೆ ಸೇರಿಸಿಕೊಳ್ಳುವ ವಿಚಾರದಲ್ಲಿ, ಅವರ ನಡವಳಿಕೆಗಳು ಸರಿಯಾಗಿದ್ದರೆ ಪಕ್ಷದ ಸಂಘಟನೆಯು ಅದನ್ನು ಗಮನಿಸಿ ನಿರ್ಧಾರ ಕೈಗೊಳ್ಳಲಿದೆ ಎಂದರು. 

ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ಪ್ರಸ್ತುತ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಕೆಲವು ನ್ಯೂನತೆಗಳನ್ನು ಗುರುತಿಸಿ, ರಾಜ್ಯ ಸರ್ಕಾರವು ಮರು ಅರ್ಜಿ ಆಹ್ವಾನಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಕಳೆದ ಮೂರೂವರೆ ವರ್ಷಗಳಲ್ಲಿ, ಯಾವುದೇ ದಾಖಲೆಗಳಿಲ್ಲದೆ ಮೃತಪಟ್ಟ ಸುಮಾರು 1.25 ಲಕ್ಷ ಮಹಿಳೆಯರ ಹೆಸರಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗವಾಗಿರುವ ಸಾಧ್ಯತೆಗಳಿದ್ದು, ಇದರ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. 

​ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದಾಗಿ ಭರವಸೆ ನೀಡಲಾಗಿತ್ತು, ಆದರೆ ಪ್ರಸ್ತುತ ಕೇವಲ ಶೇ. 20 ರಿಂದ ಶೇ. 25 ರಷ್ಟು ಜನರಿಗೆ ಮಾತ್ರ ಇದರ ಪ್ರಯೋಜನ ತಲುಪುತ್ತಿದೆ. ಉದಾಹರಣೆಗೆ, ಯುವನಿಧಿ ಯೋಜನೆಯು ಒಟ್ಟು ಪದವೀಧರ ಯುವಕರಲ್ಲಿ ಕೇವಲ ಶೇ. 20 ರಿಂದ ಶೇ. 22 ರಷ್ಟು ಜನರನ್ನು ಮಾತ್ರ ತಲುಪಿದೆ. ಆದ್ದರಿಂದ, ಈ ಯೋಜನೆಗಳ ಮರುಪರಿಶೀಲನೆ ನಡೆಸಿ, ಎಲ್ಲಾ ಅರ್ಹರಿಗೂ ಸಮರ್ಪಕವಾಗಿ ತಲುಪುವಂತೆ ಮಾಡಲು ಹೋಮ್‌ವರ್ಕ್ ಮಾಡಬೇಕಾಗಿದೆ ಎಂದು ಹೇಳಿದರು. 

​ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಯವರು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ನೀತಿಯನ್ನು ಘೋಷಿಸಿದ್ದಾರೆ. ಈ ಹಿಂದೆ ಕೂಡ ಇಂತಹದ್ದೇ ಸಭೆ ನಡೆದಿದ್ದರೂ, ಶಿವಮೊಗ್ಗದ ಎಸ್‌ಡಿಎ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡದೆ, ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ ಎಂದರು. 

​ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ, ರಾಜ್ಯದ ಕೊರತೆಯು ಸ್ವಂತ ಕಾರ್ಯಕ್ರಮಗಳಿಂದ ಆಗಿದೆಯೇ ಹೊರತು ಕೇಂದ್ರದ ಕಾರಣದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ರಿಸಾರ್ಟ್ ರಾಜಕೀಯ ಮತ್ತು ಕ್ರಾಸ್ ವೋಟಿಂಗ್ ಭೀತಿ ಎದುರಾಗಿದ್ದು, ಶಾಸಕರ ಮೇಲೆ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. 

​ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೊರತೆಯುಂಟಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯಕ್ಕೆ ಬರಬೇಕಾದ ಗೊಬ್ಬರ ಪೂರೈಕೆಯಾಗುತ್ತಿದ್ದರೂ, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಯೂರಿಯಾ ಗೊಬ್ಬರಕ್ಕೆ ಪ್ರತಿವರ್ಷ 3 ಲಕ್ಷ ಕೋಟಿ ರೂ. ಸಬ್ಸಿಡಿ ನೀಡುತ್ತಿದ್ದು, ಕೇವಲ ಶೇ. 20 ರಷ್ಟು ಭಾಗವನ್ನು ಮಾತ್ರ ರೈತರು ಭರಿಸುತ್ತಿದ್ದಾರೆ. ಯೂರಿಯಾವನ್ನು ಕೈಗಾರಿಕೆಗಳಿಗೂ ಬಳಸಲಾಗುತ್ತಿರುವುದರಿಂದ ಕಾಳಸಂತೆಯಲ್ಲಿ ದುರುಪಯೋಗವಾಗದಂತೆ ರಾಜ್ಯ ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು. 

There is nothing wrong in continuing Vijendra as BJP state president - B.Y. Raghavendra 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close