ನವಬ್ರಾಹ್ಮಣರ ರೂಪದಲ್ಲಿರುವವರೆ ಈಶ್ವರಪ್ಪ-ಕಿಮ್ಮನೆ ವಾಗ್ದಾಳಿ- Those in the form of neo-Brahmins attack Eshwarappa-Kimmane

 SUDDILIVE || SHIVAMOGGA

ನವಬ್ರಾಹ್ಮಣರ ರೂಪದಲ್ಲಿರುವವರೆ ಈಶ್ವರಪ್ಪ-ಕಿಮ್ಮನೆ ವಾಗ್ದಾಳಿ- Those in the form of neo-Brahmins attack Eshwarappa-Kimmane   

Neo, brahamins


ತೀರ್ಥಹಳ್ಳಿ, ಜೂನ್ 17: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪ್ರಜಾಪ್ರಭುತ್ವದ ಮೇಲೆ ಬಿಜೆಪಿಯ ಪ್ರಧಾನಿ ಮತ್ತು ಗೃಹ ಸಚವರು ಧಮನ ಮಾಡುತ್ತಿದ್ದಾರೆ. ನೀಟ್ ಪರೀಕ್ಷೆಯನ್ನ‌ ನಡೆಸಲು ಆಗದ ಸರ್ಕಾರಕ್ಕೆ ಒಂದು ತಿಂಗಳಲ್ಲಿ ಮತದಾನ ನೀಡುವ ಹಕ್ಕನ್ನೇ ಕಸಿದುಕೊಳ್ಳುವ ಎಸ್ಐಆರ್ ಬಗ್ಗೆ ನಿಮಗೆ ಏನು ಅನಿಸುಲ್ಲವಾ ಎಂದು ಪ್ರಶ್ನಿಸಿದರು.

ಒಂದು ತಿಂಗಳ ಅವಧಿ ಬದಲು 6 ತಿಂಗಳ  ಸಮಯ ನೀಡಬೇಕು. ಆತುರದ ಕಾರ್ಯವೇಕೆ? ಮ್ಯಾಪಿಂಗ್ ನ್ನ ಬದಿಗಿಡಿ. ಉಪಯೋಗವಿಲ್ಲದ ಮ್ಯಾಪಿಂಗ್ ಆಗಿದೆ. ಈಗ ಚಾಲನೆ ಮಾಡಿ, ಆದರೆ ನಿಗದಿತ ಸಮಯದಲ್ಲಿ ಮಾಹಿತಿಯನ್ನ ಯಾಕೆ ನೀಡಬೇಕು. ಇದೊಂದು ಕೊಲೆ ಪ್ರಯತ್ನವಾಗಿದೆ. ಇಂತಹ ದುರ್ಗುಣ ಬಿಜೆಪಿಗೆ ಮಾತ್ರ ಬರಲು ಸಾಧ್ಯವಾಗಿದೆ ಎಂದು ಗುಡುಗಿದರು. 

ಪತ್ರಿಕೆಯಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಜೂನ್ 30 ರಿಂದ ಜುಲೈ 29ರವರೆಗೆ ನಡೆಯುವ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ವಿವರಗಳನ್ನು ಆನ್‌ಲೈನ್ ಅಥವಾ ಬಿಎಲ್‌ಒ (BLO) ಮೂಲಕ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.

ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಅಗತ್ಯವಿದ್ದರೆ, ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಪತ್ರಿಕೆಯಲ್ಲಿ ಬಿಹಾರ ರಾಜ್ಯದಲ್ಲಿ ನಡೆದ SIR ಪ್ರಕ್ರಿಯೆಯ ಅನುಭವವನ್ನು ಉಲ್ಲೇಖಿಸಿ, ಮತದಾರರ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮತದಾರರು 12 ಅಂಶ ನೀಡಿ ಮತದಾನದ ಹಕ್ಕನ ಪಡೆಯಬೇಕು. ಬಿಜೆಪಿಯ ಕ್ರಿಮಿನಲ್ ಕೇಸ್ಗಳಲ್ಲಿ ನೀಡಿರುವ ಜಡ್ಜಮೆಂಟ್ ನೀಡಿದವರು ಉನ್ನತ ಮಟ್ಟದ ಸ್ಥಾನ ಪಡೆದಿದ್ದಾರೆ ಎಂದರು. 

ಮಹಿಳ ಮೀಸಲಾತಿ ಬಿಲ್ ನಲ್ಲಿ ಬಿಜೆಪಿಗೆ 34 ಮತದಾನದಿಂದ ಸೋಲುಕಂಡಿದೆ. ಅದನ್ನ ಟಿಎಂಸಿ ಮತ್ತು ಶಿವಸೇನೆ ಮೂಲಕ ತುಂಬಿಸಲು ಹೊರಟಿದ್ದಾರೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಕೆಲಸದಿಂದ ಮುಂದಿನ ದಿನಗಳಲ್ಲಿ ದೇಶವನ್ನ ಸರ್ವನಾಶ ಮಾಡಲಿದ್ದಾರೆ ಎಂದರು. 

ಕಾಂಗ್ರೆಸ್ ಮುಖಂಡರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಮತದಾರರಿಗೆ ಈ ಕುರಿತು ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಶ್ವರಪ್ಪನವರ ವಿರುದ್ಧ ವ

ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ ಬಳಸಿ ಮಾತನಾಡಿದ್ದ ಈಶ್ವರಪ್ಪನವರ ಹೆಸರನ್ನ ಸೂಚಿಸದೆ ವಾಗ್ದಾಳಿ ನಡೆಸಿದ ಕಿಮ್ಮನೆ, ವ್ಯಕ್ತಿಗತವಾಗಿ ಅವರನ್ನ ಗೌರವಿಸುತ್ತೇನೆ.  ದಾಷ್ಟ್ಯತನದಿಂದ ಗೃಹಸಚಿವರ ವಿರುದ್ಧ ಮಾತನಾಡಿದ್ದಾರೆ. 5000 ವರ್ಷದಿಂದ ತುಳಿಯಲಾಗುತ್ತಿರುವ ಸಮುದಾಯದಿಂದ ಬಂದ ಅವರನ್ನ ನವ ಬ್ರಾಹ್ಮಣರ ವೇಷ ಹಾಕಿಕೊಂಡು ಮಾತನಾಡಿದ್ದಾರೆ ಎಂದು ದೂರಿದರು.

ದಲಿತರು ಮತ್ತು ಅಲ್ಪಸಂಖ್ಯಾತರು ಟಾರ್ಗೆಟ್

ಎಸ್ಐಆರ್ ಮೂಲಕ ಬಿಜೆಪಿ ದಲಿತರು ಮತ್ತು ಅಲ್ಪಸಂಖ್ಯಾತರನ್ನ‌ ಟಾರ್ಗೆಟ್ ಮಾಡಿಕೊಳ್ಳಲಾಗಿದೆ. ಬಿಎಲ್ ಒಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಒಂದು ತಿಂಗಳಲ್ಲಿ ಮುಗಿಸುವ ಅವಸರವೇನು? ಗೃಹಲಕ್ಷ್ಮಿಯಲ್ಲಿ ಸತ್ತವರ ಹೆಸರಿಗೆ ಹಣಹೋಗ್ತಿದೆ ಎಂದರೆ ತಡೆಯಬಾರದು ಎಂದ ಕಿಮ್ಮನೆಯವರು ಕಾಂಗ್ರೆಸ್ ಮತದಾರರ ಹೆಸರು ಹೊರಗೆ ಹೋಗಲಿದೆ ಎಂಬುದು ಬಿಜೆಪಿಗೆ ಗೊತ್ತಿದೆ ಹಾಗಾಗಿ ಬಿಜೆಪಿ ಸುಮ್ಮನಿದೆ. ಡಿಲಿಮಿಟೇಷನ್ ಜಾರಿತರಲು ಈ ಎಸ್ಐಆರ್ ತರಲಾಗುತ್ತಿದೆ ಎಂದರು. 

ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಮನೆ ಇದು ನಮ್ಮ ಸರ್ಕಾರದ ನಿಲುವು. ಅದನ್ನ ವೇದಿಕೆಗಳಲ್ಲಿ ನನ್ನ‌ನಿಲುವು ತೊಳಿಸುವೆ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಜೂನ್ 21 ರಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಲಿದೆ. ಶಿವಮೊಗ್ಗದಿಂದ 1400 ಜನ ಭಾಗಿಯಾಗುವ ನಿರೀಕ್ಷೆಯಾಗಲಿದೆ. ಈಶ್ವರಪ್ಪನವರು ಗೃಹ ಸಚಿವ ಪ್ರಿಯಾಂಕ್ ಖರ್ಗೆರನ್ನ ಏಕವಚನದಲ್ಲಿ ಮಾತನಾಡಿ ನಾಶವಾಗ್ತಾರೆ ಎಂದು ಹೇಳಿದ್ದಾರೆ. ಅವರು ನಾಲಿಗೆ ಸರಿಯಿಟ್ಟುಕೊಳ್ಳಬೇಕೆಂದು ಬುದ್ದಿ ಹೇಳಿದ್ದಾರೆ.

ಎರಡು ಬಾರಿ ಇವರೆ ನಾಶವಾಗಿದ್ದಾರೆ. ಅವರ ಪಕ್ಷ ಅವರನ್ನ ಹೊರ ಹಾಕಿದೆ ಮತ್ತು ಸಂಸತ್ ಚುನಾವಣೆಯಲ್ಲಿ ಜನರೇ ನಾಶ ಮಾಡಿದ್ದಾರೆ. ಹಿರಿಯರಿದ್ದೀರಿ ಹೀಗೆ ಲೂಸ್ ಟಾಕ್ ಮಾಡಬೇಡಿ ಎಂದು ಬುದ್ದಿವಾದ ಹೇಳಿದರು. 

Those in the form of neo-Brahmins attack Eshwarappa-Kimmane

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close