SUDDILIVE || SHIVAMOGGA
ಭಾನುಜೀ ನೆನಪಿನ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಾಳೆ- Various programs to be held tomorrow as part of the commemoration of Banuji
ಸಮಾಜಸೇವಕ ಹಾಗೂ ಜನಪ್ರಿಯ ನಾಯಕರಾದ ಬಾನುಜಿಯವರ ನೆನಪಿನ ಪುಣ್ಯಸ್ಮರಣೆ ಕಾರ್ಯಕ್ರಮವು ಜೂನ್ 17ರಂದು ಬುಧವಾರ ತೀರ್ಥಹಳ್ಳಿಯ ಅಮೃತ ಭಾರತಿ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬಳಿಕ ಬೆಳಿಗ್ಗೆ 10 ಗಂಟೆಗೆ ಗಿಡ ನೆಡುವ ಕಾರ್ಯಕ್ರಮ ನಡೆಯಲಿದ್ದು, ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಗುತ್ತದೆ.
ಇದೇ ವೇಳೆ ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸಿ ಭಾನುಜಿಯವರ ಸಮಾಜಮುಖಿ ಸೇವೆ, ಜನಪರ ಚಿಂತನೆ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ವಿವರ:
- ದಿನಾಂಕ: 17-06-2026 (ಬುಧವಾರ)
- ರಕ್ತದಾನ ಶಿಬಿರ: ಬೆಳಿಗ್ಗೆ 9.00 ಗಂಟೆಗೆ
- ಗಿಡ ನೆಡುವ ಕಾರ್ಯಕ್ರಮ: ಬೆಳಿಗ್ಗೆ 10.00 ಗಂಟೆಗೆ
- ವೇದಿಕೆ ಕಾರ್ಯಕ್ರಮ: ಬೆಳಿಗ್ಗೆ 11.00 ಗಂಟೆಗೆ
- ಸ್ಥಳ: ಅಮ್ಮತ ಭಾರತಿ ಸಭಾಂಗಣ, ಮತ್ತೂರು ಶಿವಮೊಗ್ಗ
ಮಧ್ಯಾಹ್ನ 1.30 ಗಂಟೆಗೆ ಭೋಜನ ವ್ಯವಸ್ಥೆಯೂ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗಮನದ ನಿರೀಕ್ಷೆಯಿದೆ.
