ಜುಲೈ ಅಂತ್ಯಕ್ಕೆ ವಿಐಎಸ್ ಎಲ್ ಗೆ ಕಾಯಕಲ್ಪ ದೊರಕುತ್ತಾ?-Will VISL get a makeover by the end of July?

SUDDILIVE || BHADRAVATHI

ಜುಲೈ ಅಂತ್ಯಕ್ಕೆ ವಿಐಎಸ್ ಎಲ್ ಗೆ ಕಾಯಕಲ್ಪ ದೊರಕುತ್ತಾ?-Will VISL get a makeover by the end of July?


ಭದ್ರಾವತಿಯಿಂದ ಕೇಂದ್ರ ಬೃಹತ್ ಖಾತೆ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರನ್ನ ಭೇಟಿ ಮಾಡಲು ತೆರಳಿದ್ದ ಶಾರದಾ ಅಪ್ಪಾಜಿ ನೇತೃತ್ವದ ನಿಯೋಗಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಜುಲೈ ಅಂತ್ಯಕ್ಕೆ ಭೇಟಿ ನೀಡಿ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. 

 ದಿನಾಂಕ 30 ಮೇ ಶನಿವಾರ ರಂದು ಕೇಂದ್ರ ಉಕ್ಕು  ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಣ್ಣನವರನ್ನು  ಬೆಂಗಳೂರಿನ ಜೆ ಪಿ ನಗರದದಲ್ಲಿರುವ ನಿವಾಸದಲ್ಲಿ ನೀಯೋಗ ಭೇಟಿ ನೀಡಿ  ಗುತ್ತಿಗೆ ಕಾರ್ಮಿಕರ ಕೆಲಸದ ದಿನಗಳನ್ನು ಹೆಚ್ಚಿಗೆ ಮಾಡುವ ಮತ್ತು ಕಾರ್ಖಾನೆಯ ಆಧುನೀಕರಣಕ್ಕಾಗಿ ತುರ್ತಾಗಿ ಬಂಡವಾಳ ಬಿಡುಗಡೆ, ಮಾಡುವ ಕುರಿತು ಸಚಿವರಿಗೆ ಮನವಿ ಮಾಡಿದೆ. 

ಉಕ್ಕು ಸಚಿವರು ನಮ್ಮ ಮನವಿಗೆ ಸ್ಪಂದಿಸಿ, ಶೀಘ್ರದಲ್ಲಿ  ಅಂದರೆ ಜುಲೈ ತಿಂಗಳ ಅಂತ್ಯದಲ್ಲಿ ಕಾರ್ಖಾನೆಗೆ ಅವಶ್ಯಕತೆಯಿರುವ  ಬಂಡವಾಳ ವನ್ನು ತೆಗೆದುಕೊಂಡು  ಬರುವುದಾಗಿ ತಿಳಿಸಿ ಕಾರ್ಖಾನೆ ವಿಚಾರವಾಗಿ ಕಾರ್ಮಿಕರು ಯಾವುದೇ ರೀತಿಯ ಭಯಪಡಬೇಕಾದ ಅವಶ್ಯಕತೆ ಇಲ್ಲ,” ಎಂದು ಭರವಸೆ ನೀಡಿದರು.

ವಿ.ಐ.ಎಸ್.ಎಲ್ ಆಧುನೀಕರಣಕ್ಕಾಗಿ ಸತತ ಪ್ರಯತ್ನ ನಡೆಸುತ್ತಿರುವ ಉಕ್ಕು ಸಚಿವರಾದ ಸನ್ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೆ  ಗುತ್ತಿಗೆ ಕಾರ್ಮಿಕರ ಸಂಘದ ಮತ್ತು ಭದ್ರಾವತಿ ಜನತೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು. 

ನಿಯೋಗದ ಮಹತ್ವ ಭೇಟಿ

ರಾಜಕೀಯವಾಗಿ ವಿಐಎಸ್ಎಲ್ ಅಭಿವೃದ್ಧಿ ಜೆಡಿಎಸ್ ಗೆ ಅವಶ್ಯಕತೆಯಾಗಿದೆ. 2024 ರಲ್ಲಿ ಬೃಹತ್ ಕೈಗಾರಿಕೆ ಖಾತೆಯನ್ನ ಪಡೆದ ಕುಮಾರ ಸ್ವಾಮಿ ಈ ಕೈಗಾರಿಕೆಗೆ ಬಂಡವಾಳ ತಂದು ಕಾಯಕಲ್ಪ ನಡೆಸುವುದಾಗಿ ಭರವಸೆ ನೀಡಿದ್ದರು. ಇದರಂತೆ ವೈಸಾಕ್ ನಲ್ಲಿರುವ ಕೈಗಾರಿಕೆಯನ್ನ ಈಗಾಗಲೇ ಅಭಿವೃದ್ಧಿ ಪಡೆಸಿದ್ದಾರೆ. ಆದರೆ ಭದ್ರಾವತಿ VISL ಮುಂದೂಡಿಕೆಯಾಗ್ತನೇ ಇದೆ. ಮುಂದಿನ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರ ಗೆಲ್ಲಲು ಜೆಡಿಎಸ್ ಗೆ ವಿಐಎಸ್ ಎಲ್ ಅಭಿವೃದ್ಧಿ ಅತ್ಯವಶ್ಯಕವಾಗಿದೆ. 

ಒಂದು ವೇಳೆ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಕೆ.ಸಂಗಮೇಶ್ವರಗೆ ಸಚಿವ ಸ್ಥಾನ ಕೊಟ್ಟರೆ ಜೆಡಿಎಸ್ ಗೆ ರಾಜಕೀಯವಾಗಿ ಮುಂದಿನ ಚುನಾವಣೆ ಗೆಲ್ಲಲು VISL  ಕಾರ್ಖಾನೆ ಅಭಿವೃದ್ಧಿ ಅನಿವಾರ್ಯವಾಗಿದೆ. ಹಾಗಾಗಿ ಶಾರದ ಅಪ್ಪಾಜಿ ಗೌಡರ ನೇತೃತ್ವದ ನಿಯೋಗ ಕೇಂದ್ರ ಸಚಿವರನ್ನ ಭೇಟಿ ಮಾಡಿರುವುದು ಅಷ್ಟೆ ಮಹತ್ವ ಪಡೆದುಕೊಂಡಿದೆ. 

Will VISL get a makeover by the end of July

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close