ಬೀರೂರು–ಶಿವಮೊಗ್ಗ ಮಾರ್ಗದಲ್ಲಿ ಕಾಮಗಾರಿ: ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ- Work on Birur-Shivamogga route: Changes in the movement of many trains

 SUDDILIVE || SHIVAMOGGA

ಬೀರೂರು–ಶಿವಮೊಗ್ಗ ಮಾರ್ಗದಲ್ಲಿ ಕಾಮಗಾರಿ: ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ-  Work on Birur-Shivamogga route: Changes in the movement of many trains  

Train, shivamogga

ಪ್ರಯಾಣಿಕರು ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣಿಸಲು ರೈಲ್ವೆ ಮನವಿ

ಶಿವಮೊಗ್ಗ, ಜೂ.11: ಬೀರೂರು–ಶಿವಮೊಗ್ಗ ಟೌನ್ ರೈಲು ನಿಲ್ದಾಣಗಳ ಮಧ್ಯೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗವು ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಿದ್ದು, ಕೆಲವು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಿದೆ.

ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 12 ಮತ್ತು 13ರಂದು ಮಾರ್ಗಮಧ್ಯೆ 35 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ. ಜೂನ್ 14ರಿಂದ 30ರವರೆಗೆ 55 ನಿಮಿಷಗಳ ಕಾಲ ಹಾಗೂ ಜುಲೈ 1ರಿಂದ 5ರವರೆಗೆ 30 ನಿಮಿಷಗಳ ಕಾಲ ಮಾರ್ಗಮಧ್ಯೆ ವಿಳಂಬವಾಗಲಿದೆ.

ಇನ್ನು ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜುಲೈ 7ರಿಂದ 11ರವರೆಗೆ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

20690 ರೈಲು 20 ನಿಮಿಷ ತಡವಾಗಿ ಹೊರಡಲಿದೆ

ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜುಲೈ 1ರಿಂದ 5ರವರೆಗೆ ತನ್ನ ಮೂಲ ನಿಲ್ದಾಣವಾದ ಶಿವಮೊಗ್ಗ ಟೌನ್‌ನಿಂದ 20 ನಿಮಿಷ ತಡವಾಗಿ ಹೊರಡಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳು ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Work on Birur-Shivamogga route: Changes in the movement of many trains  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close