22 ಗೇಟಿನಿಂದ 24381 ಕ್ಯೂಸೆಕ್ ನೀರು ತುಂಗ ಜಲಾಶಯದಿಂದ ಹೊರಕ್ಕೆ, ಮಂಟಪ ಮುಕ್ಕಾಲು ಭಾಗ ಮುಳುಗಡೆ- 24381 cusecs of water released from Tunga reservoir through gate 22, three-quarters of the pavilion submerged

 SUDDILIVE || SHIVAMOGGA

22 ಗೇಟಿನಿಂದ 24381 ಕ್ಯೂಸೆಕ್ ನೀರು ತುಂಗ ಜಲಾಶಯದಿಂದ ಹೊರಕ್ಕೆ, ಮಂಟಪ ಮುಕ್ಕಾಲು ಭಾಗ ಮುಳುಗಡೆ- 24381 cusecs of water released from Tunga reservoir through gate 22, three-quarters of the pavilion submerged  

Water, tunga

ಶಿವಮೊಗ್ಗ, ಜು. 6: ತುಂಗಾ ಜಲಾಶಯಕ್ಕೆ ಸೋಮವಾರ ಸಂಜೆ ವೇಳೆಗೆ ಮತ್ತೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಳಗೊಂಡಿದ್ದು, ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ಸಂಜೆ 6:30ರ ಮಾಹಿತಿಯಂತೆ, ಜಲಾಶಯಕ್ಕೆ 26,437 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ನದಿಗೆ 24,381 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು ಹೊರಹರಿವು 26,437 ಕ್ಯೂಸೆಕ್ ಆಗಿದೆ.

ಇಂದು ಬೆಳಿಗ್ಗೆ ಜಲಾಶಯಕ್ಕೆ 17,465 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 15,855 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ತೆರೆದಿದ್ದ 22 ಗೇಟ್‌ಗಳಲ್ಲಿ 10 ಗೇಟ್‌ಗಳನ್ನು ಮುಚ್ಚಲಾಗಿತ್ತು.

ಆದರೆ ಸಂಜೆ ವೇಳೆಗೆ ಮೇಲ್ದಂಡೆ ಪ್ರದೇಶಗಳಲ್ಲಿ ಮಳೆಯ ಪರಿಣಾಮ ಒಳಹರಿವು ಮತ್ತೆ ಏರಿಕೆಯಾಗಿದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ.


ಹೆಚ್ಚಿನ ನೀರಿನ ಹೊರಹರಿವಿನಿಂದಾಗಿ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೋರ್ಪಳಯ್ಯನ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ನದಿ ಪಾತ್ರದ ಜನರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.

24381 cusecs of water released from Tunga reservoir through gate 22, three-quarters of the pavilion submerged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close