ದಾವಣಗೆರೆಯಿಂದ ಮಣಿಪಾಲಕ್ಕೆ ಸಾಗಿಸುತ್ತಿದ್ದ 3.5 ತಿಂಗಳ ಮಗು ಉಸಿರಾಟದ ತೊಂದರೆ: ಶಿವಮೊಗ್ಗದಲ್ಲಿ ತುರ್ತು ಚಿಕಿತ್ಸೆ-3.5-month-old baby being transported from Davangere to Manipal suffers from breathing problems: Emergency treatment in Shivamogga

 SUDDILIVE || SHIVAMOGGA

ದಾವಣಗೆರೆಯಿಂದ ಮಣಿಪಾಲಕ್ಕೆ ಸಾಗಿಸುತ್ತಿದ್ದ 3.5 ತಿಂಗಳ ಮಗು ಉಸಿರಾಟದ ತೊಂದರೆ: ಶಿವಮೊಗ್ಗದಲ್ಲಿ ತುರ್ತು ಚಿಕಿತ್ಸೆ-3.5-month-old baby being transported from Davangere to Manipal suffers from breathing problems: Emergency treatment in Shivamogga    
Davangere, manipal

ಶಿವಮೊಗ್ಗ, ಜು.30: ದಾವಣಗೆರೆಯ ಬಾಪೂಜಿ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದ್ದ ಕೇವಲ 3.5 ತಿಂಗಳ ಶಿಶುವಿಗೆ ಮಾರ್ಗಮಧ್ಯೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ, ಶಿವಮೊಗ್ಗದ ಆಸ್ಪತ್ರೆಗೆ ತುರ್ತುವಾಗಿ ದಾಖಲಿಸಿ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.

ಮಗುವನ್ನು ವಿಶೇಷ ಅಂಬುಲೆನ್ಸ್ ಮೂಲಕ ದಾವಣಗೆರೆಯಿಂದ ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿತ್ತು. ಆದರೆ ಪ್ರಯಾಣದ ವೇಳೆ ಮಗುವಿನ ಆರೋಗ್ಯದಲ್ಲಿ ಏಕಾಏಕಿ ಹದಗೆಟ್ಟು, ಉಸಿರಾಟದ ಸಮಸ್ಯೆ ಹಾಗೂ ಆಮ್ಲಜನಕದ ಪ್ರಮಾಣ (ಸ್ಯಾಚುರೇಷನ್) ಕುಸಿದ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ಅಂದಾಜಿಸಿ, ಸಮೀಪದ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸುವ ನಿರ್ಧಾರ ಕೈಗೊಂಡರು.

ತುರ್ತು ಪರಿಸ್ಥಿತಿಯನ್ನು ಗಮನಿಸಿದ ಪೊಲೀಸ್ ಇಲಾಖೆ, ಅಂಬುಲೆನ್ಸ್ ಯಾವುದೇ ಅಡಚಣೆಯಿಲ್ಲದೆ ವೇಗವಾಗಿ ಸಂಚರಿಸಲು ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು. ಇದರಿಂದ ಮಗುವನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಪಲ್ಲವಿ ಮತ್ತು ಹನುಮೇಶ್ವರ್ ಅವರು ಕೊಪ್ಪಳ ಜಿಲ್ಲೆಯವರಾಗಿದ್ದು ಪಲ್ಲವಿ ತವರು ದಾವಣಗೆರೆಯ ಹರಿಹರವಾಗಿದೆ. ಹರಿಹರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೋಡಿದ ಪಲ್ಲವಿಯವರು ತವರು ಮನೆಯಲ್ಲೇ ಇರುವಾಗ ಮಗುವೆಗೆ ಜ್ವರ ಕಾಣಿಸಿಕೊಂಡಿದೆ. 

ಈ ಕುರಿತು ಮಾತನಾಡಿದ ಅಂಬುಲೆನ್ಸ್ ಸಿಬ್ಬಂದಿ ಶ್ರೀಕಾಂತ್, "ದಾವಣಗೆರೆಯ ಬಾಪೂಜಿ ಆಸ್ಪತ್ರೆಯಿಂದ 3.5 ತಿಂಗಳ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು. ಮಾರ್ಗಮಧ್ಯೆ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ನಮ್ಮ ಪ್ರಯಾಣ ಸುಗಮವಾಗುವಂತೆ ನೆರವಾದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಪೊಲೀಸ್ ಇಲಾಖೆ ಹಾಗೂ ಸಹಕರಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು," ಎಂದು ಹೇಳಿದರು.

Davangere, manipal

ಟಯರ್ ಬ್ಲಾಸ್ಟ್

ದಾವಣಗೆರೆಯಿಂದ ಮಣಿಪಾಲಿಗೆ ಹೆಣ್ಣು ಮಗುವನ್ನ  ಕರೆದೊಯ್ಯುವಾಗ ಹೊನ್ನಾಳಿ-ನ್ಯಾಮತಿ ಮಧ್ಯೆಯಲ್ಲಿ ಅಂಬ್ಯುಲೆನ್ಸ್ ನ  ಟಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಜೀರೋ ಟ್ರಾಫಿಕ್ ನವರು ಸೇರಿ ಸ್ಟೆಪ್ನಿ ಬದಲಾಯಿಸಲಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಸರ್ಜಿ ತಲುಪಲ ಸಾಧ್ಯವಾಗಿದೆ. ನಂತರ ಸರ್ಜಿಯಲ್ಲಿ ಮಗುವಿನ ಚಿಕಿತ್ಸೆಯ ನಂತರ ವೈದ್ಯರ ಮಣಿಪಾಲಿಗೆ ಸಾಗಿಸುವ ಬಗ್ಗೆ ನಿರ್ಧರಿಸಲಿದ್ದಾರೆ. 

3.5-month-old baby being transported from Davangere to Manipal suffers from breathing problems: Emergency treatment in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close