ಸಾಲಬಾದೆಗೆ ಆಟೋ ಚಾಲಕ ಆತ್ಮಹತ್ಯೆ-ಆತ್ಮಹತ್ಯೆ ವಿಡಿಯೋ ವೈರಲ್-Auto driver commits suicide due to debt - suicide video goes viral

 SUDDILIVE || SHIVAMOGGA

ಸಾಲಬಾದೆಗೆ ಆಟೋ ಚಾಲಕ ಆತ್ಮಹತ್ಯೆ-ಆತ್ಮಹತ್ಯೆ ವಿಡಿಯೋ ವೈರಲ್-Auto driver commits suicide due to debt - suicide video goes viral    

Auto, driver

ಶಿವಮೊಗ್ಗ, ಜು.16: ಸಾಲದ ಬಾಧೆ ಹಾಗೂ ಹಣಕಾಸಿನ ಒತ್ತಡದಿಂದ ಮನನೊಂದ ಆಟೋ ಚಾಲಕರೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿಯ ದೂರಿನ ಮೇರೆಗೆ ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) 108ನೇ ಕಲಂ (ಹಿಂದಿನ ಐಪಿಸಿ 306ಕ್ಕೆ ಸಮಾನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತನ ವಿವರ

ಆತ್ಮಹತ್ಯೆ ಮಾಡಿಕೊಂಡವರು ಮಂಜುನಾಥ್ (35). ತಂದೆ ರಾಮು. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಅವರು  ಶರಾವತಿ ಬಡಾವಣೆಯ, ಪಾಂಡುರಂಗ ವಿಠ್ಠಲ ದೇವಸ್ಥಾನದ ಸಮೀಪ ವಾಸವಾಗಿದ್ದರು. ಪತ್ನಿಯ ಮನೆ ಮಿಳಘಟ್ಟವಾಗಿದೆ. 

ಸಾಲದ ಬಾಧೆ ಮತ್ತು ಆಟೋ ವಶಪಡಿಸಿಕೊಂಡ ಆರೋಪ

ಪೊಲೀಸರ ಮಾಹಿತಿ ಪ್ರಕಾರ, ಮಂಜುನಾಥ್ ಅವರು ತಮ್ಮ ಪ್ಯಾಸೆಂಜರ್ ಆಟೋಗಾಗಿ ಲೋಕೇಶ್ ಹಾಗೂ ಸುಷ್ಮಾ ಎಂಬುವರಿಂದ ಸುಮಾರು ₹30 ಸಾವಿರ ಸಾಲ ಪಡೆದಿದ್ದರು. ಆದರೆ ಸಾಲದ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಆರೋಪಿಗಳಲ್ಲಿ ಒಬ್ಬರಾದ  ಲೋಕೇಶ್ ಇತ್ತೀಚೆಗೆ ಮಂಜುನಾಥ್ ಅವರ ಆಟೋವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಜೀವನೋಪಾಯದ ಮುಖ್ಯ ಆಧಾರವಾಗಿದ್ದ ಆಟೋ ಕೈತಪ್ಪಿದ್ದರಿಂದ ಮಂಜುನಾಥ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪತ್ನಿಯ ದೂರು ಆಧರಿಸಿ ಪ್ರಕರಣ

ಮೃತನ ಪತ್ನಿ ಪಲ್ಲವಿ ಅವರು ನೀಡಿದ ದೂರಿನ ಮೇರೆಗೆ ಲೋಕೇಶ್ ಹಾಗೂ ಸುಷ್ಮಾ ವಿರುದ್ಧ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ವೈರಲ್ ವಿಡಿಯೋ ಬಗ್ಗೆ ಎಚ್ಚರಿಕೆ

ಘಟನೆಗೆ ಸಂಬಂಧಿಸಿದಂತೆ ಮೃತರು ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ. ಆದರೆ ಇಂತಹ ದೃಶ್ಯಗಳನ್ನು ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವುದು ಮೃತರ ಕುಟುಂಬದ ಗೌಪ್ಯತೆಗೆ ಧಕ್ಕೆ ತರುವುದರ ಜೊತೆಗೆ ಸಮಾಜದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಇಂತಹ ವಿಡಿಯೋಗಳನ್ನು ಹಂಚಿಕೊಳ್ಳದಂತೆ  ಮನವಿ ಮಾಡಿಕೊಳ್ಳಲಾಗಿದೆ. 

Auto driver commits suicide due to debt - suicide video goes viral 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close